ಹರಿಹರ, ಮಾ.20- ಈಚೆಗೆ ಶಿವಮೊಗ್ಗದಲ್ಲಿ ನಡೆದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಹರಿಹರದ ಶ್ರೀ ನೀಲಕಂಠೇಶ್ವರ ಪಬ್ಲಿಕ್ ಸ್ಕೂಲ್ ನ 8ನೇ ತರಗತಿ ವಿದ್ಯಾರ್ಥಿನಿ ಕೆ.ವೈ.ಸೃಷ್ಟಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಕರುಣಾ ಜೀವ ಕಲ್ಯಾಣ ಟ್ರಸ್ಟಿನ ವತಿಯಿಂದ ಇಂದು ಸಂಜೆ 5 ಕ್ಕೆ ಶ್ರೀ ಡಾ. ಸದ್ಯೋಜ್ಯಾತ ಶಿವಾಚಾರ್ಯ ಹಿರೇಮಠದ ಆವ ರಣದಲ್ಲಿ 150ನೇ ಸೈಕಲ್ ವಿತರಣೆ ಅಂಗವಾಗಿ ಇಂದು 50 ಸೈಕ ಲ್‌ಗಳ ವಿತರಣಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ. ಅತಿಥಿಗಳಾಗಿ ಡಾ. ಮಧು ಕೆ.ಎನ್., ಡಾ. ಪ್ರಭುದೇವ್ ಕೆ.ಎಂ., ಡಾ.ವಿ.ಎಸ್. ರಾಜು, ಉದಯ್ ಕುಮಾರ್, ಡಾ. ಮಾಳವಿಕ ಮತ್ತಿತರರು ಉಪಸ್ಥಿತರಿರುವರು.