ಮಲೇಬೆನ್ನೂರು, ಮಾ.20- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರತಿಬಂಧ ಅಧಿನಿಯಮ 1989 ಹಾಗೂ 2015 ಮತ್ತು ನಿಯಮಗಳು 1985 ಮತ್ತು 2016ರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಇತ್ತೀಚಿಗೆ ಸಾಲಕಟ್ಟೆ ಗ್ರಾಮದಲ್ಲಿ ಆಯೋಜಿಸಲಾಗಿತ್ತು.
ಹರಿಹರ ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಸಾಲಕಟ್ಟೆ ಗ್ರಾಮ ಪಂಚಾಯಿತಿ ಇವರ ಸಹಯೋಗದಲ್ಲಿ ಹರಿಹರ ತಾಲ್ಲೂಕಿನ ಜಿಗಳಿಯ `ರಂಗಶ್ರೀ ಕಲಾತಂಡ’ ಕಲಾವಿದರು ಪ್ರದರ್ಶನ ಮಾಡಿದ `ಮೈಲಿಗೆ’ ಎಂಬ ಬೀದಿನಾಟಕ ಪ್ರದರ್ಶನದಲ್ಲಿ ಜನಸಮುದಾಯದಕ್ಕೆ ಜಾತಿ ತಾರತಮ್ಯ ಮಾಡಬಾರದು ಎನ್ನುವ ಕಲಾವಿದರ ಸಂದೇಶ ತುಂಬಾ ಮನೋಗ್ನವಾಗಿತ್ತು.
ರಂಗಶ್ರೀ ಕಲಾತಂಡ ನಾಯಕ ಜಿಗಳಿ ರಂಗನಾಥ್, ಬಿ.ಹೆಚ್. ಉಮೇಶ್, ಸಿರಿಗೆರೆ ಶಿವಕುಮಾರ್, ಲಿಂಗರಾಜ್, ದ್ವಾರಕೀಶ್, ಶಾಂಭಾವಿ, ನೀಲಮ್ಮ, ಸುಲೋಚನಾ, ಶಿವಮ್ಮ ತಂಡದಲ್ಲಿದ್ದರು.
ಗ್ರಾಮ ಪಂಚಾಯತಿ ಕಾರ್ಯದರ್ಶಿ ಕೆ.ಎಸ್.ರುದ್ರಪ್ಪ ಅವರು ತಮಟೆ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾ.ಪಂ. ಅಧ್ಯಕ್ಷ ರಾದ ಜ್ಯೋತಿ ನಾಗರಾಜ್, ಉಪಾಧ್ಯಕ್ಷರಾದ ಸೌಭಾಗ್ಯ ಚಂದ್ರಪ್ಪ, ಪಿಡಿಓ ದಾಸರ ರವಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.