ಅನನ್ಯ ಪುರಾಣ ಮಂಗಲ ಕಾರ್ಯಕ್ರಮದಲ್ಲಿ ರವೀಂದ್ರಗೌಡ ಪಾಟೀಲ
ರಾಣೇಬೆನ್ನೂರು, ಮಾ.20- ಮಹಾತ್ಮ ಗಾಂಧೀಜಿ, ನೆಹರೂ ಮತ್ತು ಮೈಲಾರ ಮಹಾದೇವಪ್ಪನಂತಹ ಹೋರಾಟಗಾರರು ಸಹ ಸದ್ಗುರು ಸಿದ್ದಾರೂಢರ ಜೊತೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಪ್ರಮುಖ ವಿಚಾರವಾಗಿ ಚರ್ಚಿಸುತ್ತಿದ್ದರು.
ಈ ಸಂದರ್ಭದಲ್ಲಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡುವ ಮೂಲಕ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಸಿದ್ಧಾರೂಢರು ತಮ್ಮ ಅನನ್ಯ ಸೇವೆ ಸಲ್ಲಿಸಿದ್ದಾರೆಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಹೇಳಿದರು.
ನಾಗೇನಹಳ್ಳಿ ಗ್ರಾಮದಲ್ಲಿ ಜಗದ್ಗುರು ಸಿದ್ದಾರೂಢ ಸ್ವಾಮೀಜಿ ಮತ್ತು ಶ್ರೀ ಬಸವರಾಜ ಮುಪ್ಪಿನಾರ್ಯ ಸ್ವಾಮೀಜಿಯವರ 5 ದಿನದ ಪುರಾಣ ಮಂಗಲ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮುಪ್ಪಿನಾರ್ಯ ಸ್ವಾಮೀಜಿಯವರು ಸದ್ಗುರು ಸಿದ್ದಾರೂಢರ ಅನುಯಾಯಿಯಾ ಗಿದ್ದು, ಅಂತಹ ಮಹಾನ್ ಪುರುಷರು ನಡೆದಾಡಿದ ಕರ್ಮಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಧನ್ಯರು ಎಂದರು.
ಅಧ್ಯಕ್ಷತೆಯನ್ನು ಜಯನಗೌಡ ಹ.ಮುದಕನಗೌಡ್ರ ವಹಿಸಿದ್ದರು. ಸಾನ್ನಿಧ್ಯವನ್ನು ಕುಪ್ಪೇಲೂರು ಶ್ರೀ ಸದ್ಗುರು ಸಿದ್ದಾರೂಢ ಮಠದ ಶ್ರೀ ಪ್ರಿಯಾನಂದ ಸ್ವಾಮೀಜಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಭುಗೌಡ ಹ. ಗೋವಿಂದಗೌಡ್ರ, ಶ್ರೀ ಸಿದ್ದಾರೂಢ ದಾಸಣ್ಣನವರ, ಸಿದ್ದನಗೌಡ ಗೋವಿಂದಗೌಡ್ರ ಆಗಮಿಸಿದ್ದರು. ಸಾನ್ನಿಧ್ಯವನ್ನು ಮಾತೋಶ್ರೀ ಅನ್ನಪೂರ್ಣಮ್ಮನವರು ವಹಿಸಿದ್ದರು.
ಷಣ್ಮುಖನಗೌಡ ಸಣ್ಣಹನುಮನಗೌಡ್ರ ನಿರೂಪಿಸಿದರು. ಹನುಮಂತ ಗೌಡ ಪೊಲೀಸಗೌಡ್ರ ವಂದಿಸಿದರು.