ಕೆರೆ-ಕಟ್ಟೆಗಳು ಹಳ್ಳಿಯ ಜನ – ಜಾನುವಾರುಗಳಿಗೆ ಜೀವ ನಾಡಿ

ಕೆರೆ-ಕಟ್ಟೆಗಳು ಹಳ್ಳಿಯ ಜನ – ಜಾನುವಾರುಗಳಿಗೆ ಜೀವ ನಾಡಿ

ಹೊಸಪಾಳ್ಯ : ಕೆರೆ ಉದ್ಘಾಟನೆಯಲ್ಲಿ ಶಾರದೇಶಾನಂದ ಸ್ವಾಮೀಜಿ ಅಭಿಮತ

ಮಲೇಬೆನ್ನೂರು, ಮಾ.18- ಹೊಸಪಾಳ್ಯ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ `ನಮ್ಮೂರು ನಮ್ಮ ಕೆರೆ’ ಅಭಿವೃದ್ಧಿ ಕಾರ್ಯಕ್ರಮ ದಡಿಯಲ್ಲಿ ಪುರ್ನಶ್ಚೇತನಗೊಳಿಸಿರುವ ಕರಿಯಮ್ಮ ದೇವಿ ಕೆರೆ ಹಸ್ತಾಂತರ ಹಾಗೂ ನಾಮಫಲಕ ಅನಾವರಣ ಕಾರ್ಯಕ್ರಮವು ಸೋಮವಾರ ಹರಿಹರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ಶಾರದೇಶಾನಂದ ಮಹಾರಾಜ್   ದಿವ್ಯ ಸಾನ್ನಿಧ್ಯದಲ್ಲಿ ಜರುಗಿತು.

ಈ ವೇಳೆ ಆಶೀರ್ವಚನ ನೀಡಿದ ಶ್ರೀಗಳು,  ಕೆರೆ-ಕಟ್ಟೆಗಳು ಹಳ್ಳಿ ಜನರ ಹಾಗೂ ದನ-ಕರುಗಳ ಪ್ರಾಣಿ – ಪಕ್ಷಿಗಳ ಜೀವನಾಡಿಯಾಗಿದ್ದು, ಅಂತಹ ಕೆರೆಗಳನ್ನು ಗ್ರಾಮಸ್ಥರ ಸಹಭಾಗಿತ್ವದಲ್ಲೇ ಅಭಿವೃದ್ಧಿ ಪಡಿಸಿ, ಅದರ ನಿರ್ವಹಣೆಯ ಜವಾಬ್ದಾರಿಯನ್ನು ಅವರಿಗೆ ನೀಡುವ ಮಹತ್ತರ ಕಾರ್ಯ ಮಾಡುತ್ತಿರುವುದು ದೇಶಕ್ಕೆ ಮಾದರಿಯಾಗಿದೆ ಎಂದು ಶಾರದೇಶಾನಂದ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆರೆ ಹಸ್ತಾಂತರ ಮಾಡಿದ ಯೋಜನೆಯ ಜಿಲ್ಲಾ ನಿರ್ದೇಶಕ ಎಂ.ಲಕ್ಷ್ಮಣ ಮಾತನಾಡಿ, ರಾಜ್ಯದಲ್ಲಿ ಇದುವರೆಗೆ ಈ ಊರಿನ ಕೆರೆಯನ್ನೂ ಸೇರಿ 656 ಕೆರೆಗಳನ್ನು ಅಭಿವೃದ್ಧಿ ಪಡಿಸಿದ್ದೇವೆ. ನಾವು ಅಭಿವೃದ್ಧಿ ಪಡಿಸಿರುವ ಬಹುತೇಕ ಕೆರೆಗಳಲ್ಲಿ ಈಗಲೂ ಸ್ವಲ್ಪ ಪ್ರಮಾಣದಲ್ಲಿ ನೀರು ಉಳಿದಿರುವುದು ನಮಗೆ ಖುಷಿ ತಂದಿದೆ ಎಂದರು.

ಈ ಕೆರೆಯನ್ನು ಮಾದರಿ ಕೆರೆಯನ್ನಾಗಿ ಮಾಡಿ ಎಂದು ಗ್ರಾಮಸ್ಥರಿಗೆ ಲಕ್ಷ್ಮಣ ಅವರು ಮನವಿ ಮಾಡಿದರು.

ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಹೊಳೆ ಸಿರಿಗೆರೆಯ ಎನ್.ಜಿ.ನಾಗನಗೌಡ್ರು ಮಾತನಾಡಿ, ಕೆರೆ ಅಭಿವೃದ್ಧಿ ಮಾಡಿ ನೀರು ಸಂಗ್ರಹಿಸುವುದರಿಂದ ಅಂತರ್ಜಲ ಹೆಚ್ಚಾಗಲಿದೆ ಎಂದರು.

ಕೆ.ಎನ್.ಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಮಂಜಮ್ಮ ಶೇಖರಪ್ಪ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು.ಕರಿಯಮ್ಮ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗದ್ದಿಗೆಪ್ಪ ಅಧ್ಯಕ್ಷತೆ ವಹಿಸಿದ್ದರು.

ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ, ಕೃಷಿ ಮೇಲ್ವಾಚರಕ ಗಂಗಾಧರ್, ವಲಯ ಮೇಲ್ವಿಚಾರಕ ರಂಗಸ್ವಾಮಿ, ಕೆರೆ ಸಮಿತಿಯ ತಿಪ್ಪಣ್ಣ, ನಂದಿಗೌಡ್ರು, ರತ್ನಮ್ಮ, ಭಾಗ್ಯಮ್ಮ, ಶೀಲಾ, ರೇಖಮ್ಮ, ಗ್ರಾಮದ ಮುಖಂಡರಾದ ವಸಂತಪ್ಪ, ಭೀಮನಗೌಡ್ರು, ನಾಗರಾಜ್, ರವಿರಾಜ್, ಬಸಮ್ಮ, ಹಾಲಮ್ಮ, ಬಸವರಾಜ್, ಶ್ಯಾಮರಾಜ್, ಸಾಹಿತಿ ಹೆಚ್.ಪಿ.ನಾಗೇಂದ್ರಪ್ಪ, ಸೇವಾ ಪ್ರತಿನಿಧಿಗಳಾದ ಮಂಗಳಾ, ಕವಿತಾ, ಶುದ್ಧ ಘಟಕದ ಬಸವರಾಜ್, ಕೊಕ್ಕನೂರಿನ ಹನುಮಂತರಾಯ, ಕೆ.ಬೇವಿನಹಳ್ಳಿ ವಲಯ ಮೇಲ್ವಿಚಾರಕ ಮಾರುತಿಗೌಡ ಮತ್ತಿತರರು ಭಾಗವಹಿಸಿದ್ದರು.

error: Content is protected !!