ಜಗಳೂರು, ಮಾ. 17 – ರಾಜಕೀಯದಲ್ಲಿ ಪಕ್ಷ ಎಂಬುದು ತಾಯಿಯಿದ್ದಂತೆ. ದೃಢವಾಗಿ ಒಂದೇ ಪಕ್ಷಕ್ಕೆ ಸೀಮಿತವಾಗಿದ್ದರೆ ಕಾರ್ಯಕರ್ತ ರಿಗೆ, ಮುಖಂಡರಿಗೆ ಉನ್ನತ ಸ್ಥಾನ ಸಿಗುವುದು ಖಚಿತ, ಘನತೆ ಗೌರವ ಹೆಚ್ಚಿಸುತ್ತದೆ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು. ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಶನಿವಾರ ವಿವಿಧ ಪಕ್ಷಗಳಿಗೆ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದಲ್ಲಿದ್ದು ಮೂವತ್ತು ನಲವತ್ತು ವರ್ಷಗಳಿಂದ ಪಕ್ಷಕ್ಕಾಗಿ ದುಡಿದು ವಿಧಾನಸಭೆ ಚುನಾವಣೆಯಲ್ಲಿ ಯಾರೋ ಒಬ್ಬರ ಕಾರಣಕ್ಕೆ ಅಥವಾ ವಿವಿಧ ರಾಜಕೀಯ ಬೆಳವಣಿಗೆಗಳ ಕಾರಣಕ್ಕೆ ಕಾಂಗ್ರೆಸ್ ಪಕ್ಷವನ್ನು ದೂರ ತಳ್ಳಿ ಹೋಗಿದ್ದೀರಿ, ಆದರೆ ಪುನಃ ಕಾಂಗ್ರೆಸ್ ಪಕ್ಷ, ಸಿದ್ದಾಂತ ಒಪ್ಪಿ ತತ್ವಾದರ್ಶಗಳನ್ನು ಅಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಯಾದ ಎಲ್ಲಾ ಮುಖಂಡರು, ಕಾರ್ಯಕರ್ತರನ್ನು ಹೃದಯಪೂರ್ವಕ ಸ್ವಾಗತಿಸುವೆ ಎಂದರು.
ಲೋಕಸಭೆ ಚುನಾವಣೆಗೆ ಎಲ್ಲಾ ಮುಖಂಡರು ಕಾರ್ಯಕರ್ತರು ಸನ್ನದ್ಧರಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಅಗತ್ಯವಿದ್ದು ಇಂದಿನಿಂದಲೆ ಪಕ್ಷ ಸಂಘಟನೆಯಲ್ಲಿ ತೊಡಗಿಕೂಳ್ಳಬೇಕು, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಕುರಿತು ಜನರಿಗೆ ತಿಳಿಸಬೇಕು ಎಂದರು. ಕೆಪಿಸಿಸಿ ಎಸ್ಟಿ ವಿಭಾಗದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ಕೆಪಿಸಿಸಿ ಆದೇಶದ ಪ್ರಕಾರ ಈ ಹಿಂದೆ ಬೇರೆ ಪಕ್ಷಕ್ಕೆ ಹೋದವರನ್ನು ಕರೆತರಲು ಆದೇಶವಿದ್ದು, ಆದೇಶದಂತೆ ಹಲವಾರು ಮುಖಂಡರು ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದೆವೆ ಎಂದರು.
ಟಿಕೆಟ್ ಸಿಗದವರು ಒಂದು ಪಕ್ಷದಿಂದ ಇನ್ನೋಂದು ಪಕ್ಷಕ್ಕೆ ಹೋಗಿ ಟಿಕೆಟ್ ಗಿಟ್ಟಿಸಿಕೊಂಡು ಚುನಾವಣೆಗೆ ಸ್ಪರ್ಥಿಸುತ್ತಾರೆ. ಟಿಕೆಟ್ ಸಿಗಲಿಲ್ಲ ವೆಂದರೆ ಪಕ್ಷೇತರರಾಗಿ ಸ್ಪರ್ಧಿಸುತ್ತಾರೆ. ಆದರೆ ಮುಖಂಡರು, ಕಾರ್ಯಕರ್ತರು ಭವಿಷ್ಯ ಮಾತ್ರ ನಾಯಕರಂತಿರುವುದಿಲ್ಲ. ಆದ್ದರಿಂದ ಪಕ್ಷ ಉತ್ತಮ ಸ್ಥಾನ ಗೌರವ ನೀಡುತ್ತದೆ ಪಕ್ಷದ ನೆರಳಲ್ಲಿ ಬೆಳೆಯಿರಿ ಎಂದು ಕಿವಿ ಮಾತು ಹೇಳಿದರು.
ಗ್ಯಾರಂಟಿ ಯೋಜನೆಗಳು ಅಹಿಂದಕ್ಕೆ ಮಾತ್ರ ಸೀಮಿತವಲ್ಲ, ಎಲ್ಲಾ ಬಡವರ್ಗದವರ ಪಾಲಿನ ದೇವರು ಸಿದ್ದರಾಮಯ್ಯ ಎಂದರು.
ಕೆಪಿಸಿಸಿ ಎಸ್ಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೀರ್ತಿ ಕುಮಾರ್ ಮಾತನಾಡಿ, ಕಳೆದ ವಿಧಾನಸಭಾ ಕ್ಷೇತ್ರದಿಂದ ಯಾವುದೋ ಕಾರಣದಿಂದ ಪಕ್ಷದಿಂದ ದೂರ ಉಳಿದಿದ್ದ ಮುಖಂಡರು ಕಾರ್ಯಕರ್ತರು ಸ್ವತಃ ಪಕ್ಷದ ಸಿದ್ದಾಂತ ಒಪ್ಪಿ ಪಕ್ಷ ಸೇರ್ಪಡೆ ಆಗುತ್ತಿರುವುದು ಹರ್ಷ ತಂದಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಶೀರ್ ಅಹಮದ್, ಅರಸಿಕೆರೆ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮಂಜಣ್ಣ, ಪಲ್ಲಾಗಟ್ಟೆ ಶೇಖರಪ್ಪ, ಸೇರಿದಂತೆ ಇತರರು ಸಭೆಯಲ್ಲಿ ಪಾಲ್ಗೋಂಡಿದ್ದರು.