ಮಲೇಬೆನ್ನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಶೀಘ್ರ ಮೇಲ್ದರ್ಜೆಗೆ : ಶಾಸಕ ಬಿ.ಪಿ.ಹರೀಶ್ ಭರವಸೆ

ಮಲೇಬೆನ್ನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಶೀಘ್ರ ಮೇಲ್ದರ್ಜೆಗೆ : ಶಾಸಕ ಬಿ.ಪಿ.ಹರೀಶ್ ಭರವಸೆ

ಮಲೇಬೆನ್ನೂರು, ಮಾ.6- ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಜಿ+1 ಮಾದರಿಯಲ್ಲಿ ಎರಡು ಕೊಠಡಿ ನಿರ್ಮಾಣಕ್ಕೆ ಬುಧವಾರ ಶಾಸಕ ಬಿ.ಪಿ.ಹರೀಶ್ ಅವರು ಗುದ್ದಲಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು.

ಇದೇ ವೇಳೆ ಪ್ರೌಢಶಾಲೆ ವಿಭಾಗದ ನೂತನ ಶಾಲಾ ಕೊಠಡಿಯನ್ನು ಶಾಸಕ ಹರೀಶ್ ಉದ್ಘಾಟಿಸಿ ಶುಭ ಹಾರೈಸಿದರು.

ನಂತರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಹರೀಶ್ ಅವರು, ಸರ್ಕಾರ ಈ ವರ್ಷ ಪ್ರತಿ ತಾಲ್ಲೂಕಿಗೆ 2 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನೀಡುವ ಸಾಧ್ಯತೆ ಇದ್ದು, ಮಲೇಬೆನ್ನೂರಿನ ಈ ಕಾಲೇಜನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಶಿಫಾರಸ್ಸು ಮಾಡುವುದಾಗಿ ಹೇಳಿದರು.

ಸರ್ಕಾರಗಳು ಎಲ್ಲಾ ಮಕ್ಕಳು ಶಿಕ್ಷಣವಂತರಾಗಬೇಕೆಂಬ ಉದ್ದೇಶದಿಂದ ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತಿದ್ದು, ವಿದ್ಯಾರ್ಥಿಗಳೂ ಕೂಡಾ ಚೆನ್ನಾಗಿ ಓದಿ ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತರಬೇಕೆಂದು ಹರೀಶ್ ಹೇಳಿದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಆನಂದಾ ಚಾರ್, ಸದಸ್ಯರಾದ ಬಟ್ಟೆ ಅಂಗಡಿ ವಿಶ್ವ, ವೀರೇಶ್, ಬಸವ ರಾಜ್, ಪುರಸಭೆ ಸದಸ್ಯರಾದ ಷಾ ಅಬ್ರಾರ್, ಬೆಣ್ಣೆಹಳ್ಳಿ ಸಿದ್ದೇಶ್, ಬಿ.ಮಂಜುನಾಥ್, ಮಾಜಿ ಸದಸ್ಯರಾದ ಭಾನುವಳ್ಳಿ ಸುರೇಶ್, ಪಿ.ಆರ್.ರಾಜು, ಎ.ಕೆ.ಲೋಕೇಶ್, ಪ್ರೌಢಶಾಲೆಯ ಉಪಪ್ರಾಚಾರ್ಯ ಜಗದೀಶ್, ಉಜ್ಜಮ್ಮನವರ್, ಪ್ರೌಢಶಾಲೆ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷ ಓ.ಜಿ.ಮಂಜುನಾಥ್, ಸದಸ್ಯ ಸದಾನಂದ್, ಭೋವಿ ಮಂಜಣ್ಣ, ನ್ಯಾಯಬೆಲೆ ಅಂಗಡಿ ಮಂಜಣ್ಣ, ಪಾಳೇಗಾರ್ ನಾಗರಾಜ್, ಸುಣಗಾರ್ ಮಂಜಣ್ಣ, ನಿರ್ಮಿತಿ ಕೇಂದ್ರದ ಇಇ ರವಿ, ಗುತ್ತಿಗೆದಾರ ಜಿ.ಪಿ.ಮಂಜುನಾಥ್ ಮತ್ತಿತರರು ಈ ವೇಳೆ ಹಾಜರಿದ್ದರು.

ಉಪನ್ಯಾಸಕ ತಿಪ್ಪೇಸ್ವಾಮಿ ಸ್ವಾಗತಿಸಿದರು. ದೈಹಿಕ ಶಿಕ್ಷಕ ಜಿ ಹಾಲಪ್ಪ ವಂದಿಸಿದರು.

error: Content is protected !!