ಹರಿಹರ,ಮಾ.6- ತಾಲ್ಲೂಕಿನ ಕೆ.ಬೇವಿನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ ಶಾಲೆಯ ಸಬಲೀಕರಣ ಹಾಗೂ ಪೀಠೋಪಕರಣಗಳ ಉದ್ಘಾಟನೆಯನ್ನು ಶಾಸಕ ಬಿ.ಪಿ. ಹರೀಶ್ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ರೇಖಾ ಬಿ. ಎಂ. ಹಾಲೇಶ್, ಯಶೋಧ ಜಿ.ಕೆ. ಉಮಾ ಮಹೇಶ್, ಮಂಜುಳಾ, ಮಂಜಪ್ಪ, ಮಹೇಶ್ವರಪ್ಪ, ಎಂ. ಬಸವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ. ಇಸಿಓ ಮಂಜುನಾಥ್. ಬಿ ಆರ್ ಸಿ ತಿಪ್ಪೇಸ್ವಾಮಿ. ಬಿ ಆರ್ ಪಿ ಶ್ರೀಮತಿ ಭಾಗ್ಯಲಕ್ಷ್ಮಿ, ಮುಖ್ಯೋಪಾಧ್ಯಾಯರಾದ ಇಂದ್ರಮ್ಮ. ಎನ್ಪಿಎಸ್ ನೌಕರರ ಸಂಘದ ಕಾರ್ಯದರ್ಶಿ ಸಂಗಣ್ಣನವರ್ ಹಾಗೂ ಮುಖಂಡರಾದ ನಾಗರಾಜ್ ಅಂಗಡಿ, ಭಾಗ್ಯಮ್ಮ, ಸವಿತಾ, ಗುರುಬಸವರಾಜ್, ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಕೆ.ಬೇವಿನಹಳ್ಳಿ ಶಾಲೆ ಸಬಲೀಕರಣ : ಶಾಸಕ ಹರೀಶ್ ಉದ್ಘಾಟನೆ
