ಹರಿಹರ, ಮಾ. 6- ಇಲ್ಲಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಾಡಿದ್ದು ದಿನಾಂಕ 8ರ ಶುಕ್ರವಾರ ಮಹಾಶಿವರಾತ್ರಿ ಕಾರ್ಯಕ್ರಮ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಮುಖ್ಯಸ್ಥರಾದ ಶಿವದೇವಿ ಅಮ್ಮನವರು ತಿಳಿಸಿದ್ದಾರೆ. ಶಿವರಾತ್ರಿ ಪ್ರಯುಕ್ತ ಸಂಕರ್ಷಣ ನೃತ್ಯಾಲಯದ ಗುರು ಹಾಗೂ ಶಿಷ್ಯ ವೃಂದದಿಂದ ಶಿವ ತಾಂಡವ ಮತ್ತು ಅರ್ಧನಾರೀಶ್ವರ ನೃತ್ಯ, ನಂತರ ದ್ವಾದಶ ಜ್ಯೋತಿರ್ಲಿಂಗಗಳ ಶೋಭಾಯಾತ್ರೆ ಹಾಗೂ ವಿಶೇಷವಾಗಿ ಅಮರನಾಥ ದರ್ಶನ ಏರ್ಪಡಿಸಲಾಗಿದೆ.
September 9, 2024