ಹರಪನಹಳ್ಳಿ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್
ಹರಪನಹಳ್ಳಿ, ಮಾ. 5 – ಮುಸ್ಲಿಂ ಸಮುದಾಯದ ಮಕ್ಕಳು ಉರ್ದು ಭಾಷೆಯ ಜೊತೆಗೆ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಎಂದು ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿಯಿರುವ ಅಂಜುಮನ್ ಶಾದಿಮಹಲ್ನಲ್ಲಿ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶನಿವಾರ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಸ್ಲಿಂ ಸಮುದಾಯವು ದುಡಿಮೆ ಜೊತೆಗೆ ಶಿಕ್ಷಣಕ್ಕೂ ಆದ್ಯತೆ ನೀಡಬೇಕು. ಸಮುದಾಯದ ಮಕ್ಕಳು ಚನ್ನಾಗಿ ಓದಿ ಮುಂದೆ ಬರಬೇಕು, ಪೋಷಕರಿಗೆ ಒಳ್ಳೆಯ ಹೆಸರು ತರಬೇಕೆಂದು ಸಲಹೆ ನೀಡಿದರು.
ಇದೇ ವೇಳೆ ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ವರ್ಗಾವಣೆಯಾಗಿ ಬಂದ ಮತ್ತು ಹೊಸದಾಗಿ ಸೇವೆಗೆ ಸೇರಿದ ಮುಸ್ಲಿಂ ಸಮುದಾಯದ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಸಂಗಪ್ಪನವರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಎಂ.ವಿ. ಅಂಜಿನಪ್ಪ, ಸರ್ಕಾರಿ
ನೌಕರರ ಸಂಘದ ಅಧ್ಯಕ್ಷ ಎಸ್. ರಾಮಪ್ಪ, ರಾಜ್ಯ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಎಂ. ಷರೀಫ್, ತಾಲ್ಲೂಕು ಅಧ್ಯಕ್ಷ ಪುರಸಭೆ ಸದಸ್ಯರಾದ ಲಾಟಿ ದಾದಾಪೀರ್, ಜಾಕೀರ್ ಹುಸೇನ್, ಕೆ.ಎಸ್. ಉಸ್ಮಾನ್, ಅಂಜುಮಾನ್ ಸಮಿತಿ ಅಧ್ಯಕ್ಷ ಎಂ. ರೆಹಮಾನ್, ಎಂ. ದಾದಾ ಖಲಂದರ್, ರಾಜಶೇಖರ್, ಪದ್ಮಲತಾ, ಚಂದ್ರಮೌಳಿ, ಮನ್ಸೂರ್, ಪದ್ಮರಾಜ್, ಅಂಜಿನಪ್ಪ, ಸಲೀಂ, ಅರ್ಜುಮುನ್ನೀಸಾ, ನಟರಾಜ ಸೇರಿದಂತೆ ಇತರರು ಇದ್ದರು.