ಶ್ರೀ ಈಶ್ವರಾನಂದ ಸ್ವಾಮೀಜಿ ಲಿಂಗೈಕ್ಯ

ಶ್ರೀ ಈಶ್ವರಾನಂದ ಸ್ವಾಮೀಜಿ ಲಿಂಗೈಕ್ಯ

ರಾಣೇಬೆನ್ನೂರು, ಮಾ. 5-  ತಾಲ್ಲೂಕಿನ ಅಂಕಸಾಪೂರ ಗ್ರಾಮದ ಶಿವಾನಂದ ಮಠದ 52 ವಯಸ್ಸಿನ ಶ್ರೀ ಈಶ್ವರಾನಂದ ಸ್ವಾಮೀಜಿ ಹುಬ್ಬಳ್ಳಿಯ ಸಾಯಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದು, ಸಂಜೆ ಮಠದ ಆವರಣದಲ್ಲಿ  ತೇರದಾಳ ದಯಾನಂದಶ್ರೀ ಹಾಗೂ ಐರಣಿ ಮನಿ ಮಠದ ಚರಮೂರ್ತಿಗಳ  ಸಮ್ಮುಖದಲ್ಲಿ ಅಂತಿಮ  ವಿಧಿ ವಿಧಾನಗಳನ್ನು ನಡೆಸಲಾಯಿತು.

ಹರಿಹರ ತಾಲ್ಲೂಕಿನ ಪಾಳ್ಯ ಗ್ರಾಮದ ಮಹದೇವಪ್ಪ ವಸಂತಮ್ಮ ದಂಪತಿ ಪುತ್ರರಾದ ಶ್ರೀಗಳು 30 ವರ್ಷಗಳ ಹಿಂದೆ ಅಂಕಸಾಪುರ ಗ್ರಾಮಕ್ಕೆ ಆಗಮಿಸಿ, ಅಲ್ಲಿ ಮಠ ಕಟ್ಟಿ ಆಂಜನೇಯ ಸ್ವಾಮಿ ಆರಾಧನೆಯೊಂದಿಗೆ ಸುತ್ತಲಿನ ಹತ್ತಾರು ಗ್ರಾಮಗಳ ಜನರಿಗೆ ಧರ್ಮ ಬೋಧಿಸುತ್ತಿದ್ದರು. ಗದಗ ಜಿಲ್ಲೆಯ ಬೆಟಗೇರಿಯಲ್ಲಿ ಸಿದ್ದಾರೂಢರ ಮಠ ಕಟ್ಟಿ ಬೆಳೆಸಿದ್ದರು. ಶ್ರೀಗಳ ಅಗಲಿಕೆಯ ಸುದ್ದಿ ತಿಳಿದ ಸಾವಿರಾರು ಭಕ್ತರು ಕಂಬನಿ ಮಿಡಿದಿದ್ದಾರೆ.

error: Content is protected !!