ಎಕ್ಕೆಗೊಂದಿ : 2 ಹನಿ ಲಸಿಕೆಯಿಂದ ಅಂಗವಿಕಲತೆಗೆ ತಡೆ

ಎಕ್ಕೆಗೊಂದಿ : 2 ಹನಿ ಲಸಿಕೆಯಿಂದ ಅಂಗವಿಕಲತೆಗೆ ತಡೆ

ಮಲೇಬೆನ್ನೂರು, ಮಾ.3- ಎಕ್ಕೆಗೊಂದಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಹರಿಹರ ತಾಲ್ಲೂಕು ಮಟ್ಟದ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಬೆಳ್ಳೂಡಿ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ವೀರಣ್ಣ ಅವರು ಮಗುವಿಗೆ ಲಸಿಕೆ ಹಾಕುವ ಮೂಲಕ ಉದ್ಘಾಟಿಸಿದರು.

ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದ ಟಿಹೆಚ್ಓ ಡಾ. ಪ್ರಶಾಂತ್ ಅವರು, 2 ಹನಿ ಪೋಲಿಯೋ ಲಸಿಕೆ ಹಾಕುವುದರಿಂದ ಅಂಗವಿಕಲತೆ ಆಗದಂತೆ ನೋಡಿಕೊಳ್ಳಬಹುದು. ಮಾರ್ಚ್ 3 ರಿಂದ 6 ರವರೆಗೆ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಈ ಪೋಲಿಯೋ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕು.  ಹರಿಹರ ತಾಲ್ಲೂಕಿನಲ್ಲಿ 22359 ಮಕ್ಕಳು ಈ ಲಸಿಕೆ ಅರ್ಹರಿದ್ದು, 4 ದಿನಗಳಲ್ಲಿ ಶೇ.100 ರಷ್ಟು ಲಸಿಕೆಯನ್ನು ಹಾಕುವ ಗುರಿಹೊಂದಿದ್ದೇವೆ ಎಂದು ಡಾ.ಪ್ರಶಾಂತ್ ತಿಳಿಸಿದರು.

ವೈದ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ, ತಾ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮ್ಮಣ್ಣ, ಸುಧಾ ಸುಲಾಖೆ,
ಗ್ರಾ.ಪಂ. ಸದಸ್ಯರಾದ ಶಿವಪ್ಪ, ಹನುಮಂತಪ್ಪ, ಆಶಾ ಕಾರ್ಯಕರ್ತೆ ಚಂದ್ರಕಲಾ, ಅಂಗನವಾಡಿ ಕಾರ್ಯಕರ್ತೆ ನೇತ್ರಾವತಿ, ಎಸ್‌ಡಿಎಂಸಿ ಅಧ್ಯಕ್ಷೆ ನೇತ್ರಾವತಿ ಹಾಗೂ ಗ್ರಾಮಸ್ಥರು ಈ ವೇಳೆ ಹಾಜರಿದ್ದರು.

error: Content is protected !!