ಸ್ನಾತಕೋತ್ತರ ಕೇಂದ್ರದ ಅಧ್ಯಯನ ಕೇಂದ್ರ ನಿರ್ಮಾಣಕ್ಕೆ 100 ಎಕರೆ ಭೂಮಿ ನೀಡಲು ಪ್ರಯತ್ನ

ಸ್ನಾತಕೋತ್ತರ ಕೇಂದ್ರದ ಅಧ್ಯಯನ ಕೇಂದ್ರ ನಿರ್ಮಾಣಕ್ಕೆ 100 ಎಕರೆ ಭೂಮಿ ನೀಡಲು ಪ್ರಯತ್ನ

ಹರಪನಹಳ್ಳಿ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಭರವಸೆ

ಹರಪನಹಳ್ಳಿ, ಮಾ. 1- ಪಟ್ಟಣದಲ್ಲಿ ಆರಂಭವಾಗಿರುವ ನೂತನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ 100 ಎಕರೆ ಭೂಮಿ ನೀಡಲು ಪ್ರಯತ್ನ ಮಾಡುವು ದಾಗಿ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಭರವಸೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೊಸ ಕಟ್ಟಡದಲ್ಲಿ ಉನ್ನತ ಶಿಕ್ಷಣ ಇಲಾಖೆಯಿಂದ ತಾತ್ಕಾಲಿಕವಾಗಿ ಮಂಜೂರಾಗಿರುವ ನಾಲ್ಕು ಕೊಠಡಿಗಳಲ್ಲಿ ನೂತನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ತಹಶೀಲ್ದಾರ್‌ ಬಳಿ 50 ಎಕರೆ ಭೂಮಿ ನೀಡುವ ಕುರಿತು ಚರ್ಚಿಸಿದ್ದು, ಇನ್ನೂ 50 ಎಕರೆ ಭೂಮಿಯನ್ನು ಸರ್ಕಾರದಿಂದ ಕೊಡಿಸಲು ಸಕಲ ಪ್ರಯತ್ನ ಮಾಡುತ್ತೇನೆ, ಮುಂದಿನ ದಿನಗಳಲ್ಲಿ ಇಲ್ಲಿಯೇ ವಿಶ್ವವಿದ್ಯಾಲಯ ಸ್ಥಾಪನೆ ಆಗಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಹರಪನಹಳ್ಳಿ ಶೈಕ್ಷಣಿಕ ಹಬ್ ಆಗಿದ್ದು, ಇಲ್ಲಿಯ ಸಾಕಷ್ಟು ವಿದ್ಯಾರ್ಥಿಗಳು ಸ್ನಾತಕೋತ್ತರ ಕೋರ್ಸ್‌ಗಳ ಅಧ್ಯಯನ ಮಾಡಲು ದೂರದ ನಗರಗಳಿಗೆ ಹೋಗುತ್ತಿರುವುದನ್ನು ಮನಗಂಡು
ಇಲ್ಲಿ ಪಿಜಿ ಸೆಂಟರ್ ತೆರೆಯಲಾಗಿದೆ ಎಂದು ಹೇಳಿದರು.

ಇಲ್ಲಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ ಶಾಸಕರು, ಇದರ ಸದುಪಯೋಗವನ್ನು ಹರಪನಹಳ್ಳಿ ಸೇರಿದಂತೆ ಸುತ್ತ ಮುತ್ತಲ ತಾಲ್ಲೂಕುಗಳ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕೋರಿದರು.

ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಅನಂತ ಎಲ್.ಝಂಡೇಕರ್ ಮಾತನಾಡಿ, ಉನ್ನತ ಶಿಕ್ಷಣ ದೂರದ ಬೆಟ್ಟವಾಗಬಾರದು, ಪ್ರತಿಯೊಬ್ಬರ ಮನೆ ಮನೆಗೂ ತಲುಪಬೇಕು, ಹೆಣ್ಣು ಮಕ್ಕಳು ಉನ್ನತ ಶಿಕ್ಷಣದಿಂದ ದೂರ ಉಳಿಯಬಾರದು ಎಂದರು.

ಇಲ್ಲಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕರಾಗಿ ಬಳ್ಳಾರಿ ಶ್ರೀಕೃಷ್ಣ ವಿವಿಯ ಸಹಾಯಕ ಕುಲ ಸಚಿವ ಡಾ.ಪ್ರಶಾಂತರವರನ್ನು ನೇಮಕ ಮಾಡಿದ್ದೇನೆ ಎಂದು ಕುಲಸಚಿವರು ಘೋಷಿಸಿದರು.

ವಿವಿಯ ಸಿಂಡಿಕೇಟ್ ಸದಸ್ಯ ಸುರೇಶ ಆರ್. ಸಜ್ಜನ ಮಾತನಾಡಿ, ಹೊಸದಾಗಿ ಆರಂಭಗೊಂಡಿರುವ ಇಲ್ಲಿಯ ಪಿ.ಜೆ.ಸೆಂಟರ್‍ಗೆ ಕನಿಷ್ಟ 200 ವಿದ್ಯಾರ್ಥಿಗ ಳಾದರೂ ಸೇರ್ಪಡೆಯಾಗಬೇಕು, ಇದರ ಉನ್ನತಿಗೆ ಸರ್ವರೂ ಕೈ ಜೋಡಿಸಬೇಕು ಎಂದು ಅವರು ತಿಳಿಸಿದರು.

ಬಳ್ಳಾರಿ ವಿವಿಯ ಕುಲಸಚಿವರಾದ ಎಸ್.ಎನ್.ರುದ್ರೇಶ, ಪ್ರೊ.ರಮೇಶ ಓಲೆಕಾರ ಮಾತನಾಡಿದರು. ವಿವಿಯ ಸಿಂಡಿಕೇಟ್ ಸದಸ್ಯ ಟಿ.ಎಂ.ರಾಜಶೇಖರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. 

ತೆಗ್ಗಿನಮಠದ ಕಾರ್ಯದರ್ಶಿ ಡಾ.ಟಿ.ಎಂ.ಚಂದ್ರಶೇಖರಯ್ಯ, ಬುದ್ದ ಬಸವ ಅಂಬೇಡ್ಕರ ವಿದ್ಯಾಸಂಸ್ಥೆಯ ಸಂಸ್ಥಾಪಕ ರಾದ ಗುಂಡಗತ್ತಿ ಕೊಟ್ರಪ್ಪ, ಹರಪನಹಳ್ಳಿ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಷಣ್ಮೂಖನಗೌಡ, ಹೂವಿನ ಹಡಗಲಿ ಪ್ರಾಚಾರ್ಯರಾದ ಪ್ರೊ.ವಿಜ ಕುಮಾರ, ಎಸ್.ಎಸ್.ಪಾಟೀಲ್, ಹೊಸಪೇಟೆಯ ಪ್ರಾಚಾರ್ಯ ವಿಶ್ವನಾಥಗೌಡ್ರು, ಕೂಡ್ಲಿಗಿಯ ನಿವೃತ್ತ ಪ್ರಾಚಾರ್ಯ ಪಿ.ಎಂ.ಸೋಮಯ್ಯ, ತಾ.ಪಂ. ಮಾಜಿ ಸದಸ್ಯರಾದ ಹುಲ್ಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಪ್ರಾದ್ಯಾಪಕರಾದ ಡಾ.ಭೀಮಪ್ಪ, ಪ್ರಭುನಾಯ್ಕ, ಕಲ್ಲಹಳ್ಳಿ ಗುರುಸಿದ್ದಯ್ಯ, ಕನ್ನಿಹಳ್ಳಿ ಪ್ರಭಾಕರ ಇತರರು ಉಪಸ್ಥಿತರಿದ್ದರು.

error: Content is protected !!