ದಾವಣಗೆರೆ, ಫೆ. 27- ಭಾರತ ಹುಣ್ಣಿಮೆಯ ಪ್ರಯುಕ್ತ ಶ್ರೀ ವೀರಾಂಜನೇಯ ಮಹಾಸ್ವಾಮಿ ಧ್ಯಾನ ಮಂದಿರದಲ್ಲಿ ಕ್ಷೀರಾಭಿಷೇಕ, ಮಹಾಮಂಗಳಾರತಿ, ವಿಶೇಷ ಪೂಜೆ, ಭಜನೆ ಕಾರ್ಯಕ್ರಮಗಳು ನಡೆದವು.
ಇದೇ ಸಂದರ್ಭದಲ್ಲಿ ಸಂಗಪ್ಪ ತೋಟದ ಶಾಮನೂರು ಮಾತನಾಡಿ, ಕೊಟ್ಟಿದ್ದು ತನಗೆ- ಬಚ್ಚಿಟ್ಟಿದ್ದು ಪರರಿಗೆ ಎಂಬ ಸರ್ವಜ್ಞನ ವಾಣಿಯಂತೆ ಸದಾ ಹಸನ್ಮುಖಿ, ನಗುಮೊಗದ ಸ್ನೇಹಿತ ಕಂಚಿಕೆರೆ ಗ್ರಾಮದ ವಾಸಿಗಳಾದ ಹಳ್ಳಿ ಗಂಗವ್ವರ ಗುಂಡಪ್ಪನ ಮಗ ಬೀರಪ್ಪ ಇವರು ದಾವಣಗೆರೆಯಲ್ಲಿ ನೆಲೆಸಿದ್ದು, ಸ್ವಾಮಿಯ ಕೃಪೆಯಿಂದಾಗಿ ಯಶಸ್ವಿ ಜೀವನ ನಡೆಸುತ್ತಿದ್ದಾರೆ ಎಂದರು.
ಧ್ಯಾನ ಮಂದಿರದಲ್ಲಿ ಧ್ವನಿವರ್ಧಕದ ಅವಶ್ಯಕತೆ ಇರುವುದನ್ನು ಅರಿತು ಸೌಂಡ್ ಸಿಸ್ಟಮ್ ಕೊಡಿಸುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ ಎಂದರು. ಬಸವರಾಜ ಗುರೂಜಿ ದಾನಿಗಳ ಸೇವಾ ಕಾರ್ಯವನ್ನು ಸ್ಮರಿಸಿದರು. ಇದೇ ವೇಳೆ ದಾನಿಗಳನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಹಾ ದೇವಮ್ಮ ಮಲ್ಲಿಕಾರ್ಜುನಪ್ಪ, ಮಹೇಶಪ್ಪ ಗಂಗನಕಟ್ಟೆ, ಕಾಮಾಕ್ಷಮ್ಮ, ಸುಧಾ, ಮಲ್ಲೇಶಪ್ಪ, ವಿನಾಯಕ, ಸಂತೋಷ್ ಕುಮಾರ್, ಗೀತಾ, ಜಯಮ್ಮ, ಉದಯಕುಮಾರ್, ಮಂಜಮ್ಮ, ಉಮಾದೇವಿ, ಎಂ.ವಿ.ಕೊಟ್ರೇಶ್, ಎಂ.ವಿ.ಸುರೇಶ್, ಎಂ.ವಿ.ಮಂಜುನಾಥ್, ಎಂ.ಬಿ. ನಾಗರಾಜ್, ಎಂ.ಬಿ.ವಿಜಯಕುಮಾರ್, ಮಹಾದೇವಪ್ಪ ಹೊಸಮನಿ, ಧರಣೇಮದ್ರ, ಕೃಷ್ಣಮೂರ್ತಿ, ಕವಿತ ನಾಗರಾಜ್, ಮೃತ್ಯುಂಜಯ, ರುದ್ರಮ್ಮ ಮಲ್ಲಿಕಾರ್ಜುನಪ್ಪ, ಪುಷ್ಪಾವತಿ ಸಂಗಮರಾಧ್ಯ, ಬೇಳದೇರಿ ಸಿದ್ಧಣ್ಣ, ಪ್ರೇಮಾ ನಾಗರಾಜ್, ಕಾಯಕಯೋಗಿ ಮಂಜಣ್ಣ, ಪ್ರಮಾ ಮೃತ್ಯುಂಜಯಪ್ಪ, ವಾಣಿ ರಾಜಕುಮಾರ್, ಸೋಮಶೇಖರಯ್ಯ, ನಾಗರಾಜ್, ನಂದಿನಿ ಲೋಕೇಶ್, ಈರಮ್ಮ ಶಿವರುದ್ರಯ್ಯ, ಮುಕ್ತಾ ಶ್ರೀನಿವಾಸ್, ಶ್ರೀಧರ್, ಗಿರಿಜಮ್ಮ ಬಸವರಾಜ್, ಸುಧಾ ಶವದೇವಪ್ಪಗೌಡ್ರು ಶ್ಯಾಗಲೆ, ಡಾ. ಕರಿಬಸಪ್ಪ, ರೇಣುಕಾ ಸುನೀಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.