ಸಂಘದ ಅಜೆಂಡಾ ಯಶಸ್ವಿಯಾದರೆ ಮನುವಾದದ ಆಳ್ವಿಕೆ : ಹೆಣ್ಣೂರು ಶ್ರೀನಿವಾಸ್

ದಾವಣಗೆರೆ, ಫೆ. 27 – ಸಂಘ ಪರಿವಾರದ ಅಜೆಂಡಾ ಯಶಸ್ವಿಯಾದರೆ, ದೇಶದಲ್ಲಿ ಮನುವಾದದ ಆಳ್ವಿಕೆ ಶುರುವಾಗುತ್ತದೆ. ಧರ್ಮದ ಅಮಲಿನಿಂದ ಹೊರಬಂದು ಮನುವಾದವನ್ನು ಮೆಟ್ಟಿ ನಿಲ್ಲಬೇಕಾಗಿದೆ. ಚುನಾವಣೆಯಲ್ಲಿ ಕೋಮುವಾದವನ್ನು ಸೋಲಿಸಬೇಕಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಘಟಕದ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಹೇಳಿದರು.

ನಗರದ ರೋಟರಿ ಬಾಲಭವನದ ಸಿ.ಕೇಶವಮೂರ್ತಿ ಸಭಾಂಗಣದಲ್ಲಿ ಭಾನುವಾರ ನಡೆದ ‘ಪ್ರಸ್ತುತ ಕಾಲಘಟ್ಟದಲ್ಲಿ ದಲಿತ ಸಂಘಟನೆಯ ಪಾತ್ರ’ದ ಬಗ್ಗೆ ವಿಚಾರ ಸಂಕಿರಣ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದ.ಸಂ.ಸ. ಹಲವು ಹೋರಾಟಗಳನ್ನು ನಡೆಸಿದೆ. ಮಹಿಳೆಯರ ಹಕ್ಕು, ಸಾಮಾಜಿಕ ನ್ಯಾಯಕ್ಕಾಗಿ 50 ವರ್ಷಗಳಿಂದ ದುಡಿದಿದೆ. ಎಲ್ಲ ಸಮುದಾಯದವರೂ ಐಎಎಸ್‌, ಐಪಿಎಸ್‌ ಉನ್ನತ ಹುದ್ದೆಗಳನ್ನು ಪಡೆಯಲು ಸಂವಿಧಾನದಿಂದ ಸಾಧ್ಯವಾಗಿದೆ ಎಂದು ಹೇಳಿದರು.

ರಾಜ್ಯ ಸಂಘಟನಾ ಸಂಚಾಲಕ ಮರೀಶ್ ನಾಗಣ್ಣವರ್, ಜಿಲ್ಲಾ ಘಟಕದ ಸಂಚಾಲಕ ರಾಘವೇಂದ್ರ ಡಿ. ಕಡೇಮನಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಆರ್‌.ಪ್ರಭಾಕರ್ ಪಾಂಡೋಮಟ್ಟಿ, ತಮ್ಮಣ್ಣ ಜಿ.ಹೆಚ್‌.ದಿಡಗೂರು, ರವಿ ಎಂ. ಕೆಟಿಜೆ ನಗರ,  ಹೆಚ್.ಸುರೇಶ್, ಶಿವಶಂಕರಪ್ಪ ಆಲೂರು, ಅಣ್ಣಪ್ಪ ಅಜ್ಜೇರ, ರಮೇಶ್‌ ಮಾಯಕೊಂಡ, ಅನೀಸ್ ಪಾಷ, ಜಯಣ್ಣ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!