ಡಾ.ರಾಜ್‌ರಂತಹ ನಟನನ್ನು ಕಲಾ ಜಗತ್ತಿಗೆ ನೀಡಿದ್ದೇ ರಂಗಭೂಮಿ

ಡಾ.ರಾಜ್‌ರಂತಹ ನಟನನ್ನು  ಕಲಾ ಜಗತ್ತಿಗೆ ನೀಡಿದ್ದೇ ರಂಗಭೂಮಿ

‘ಸತಿ ಸಂಸಾರದ ಜ್ಯೋತಿ’ ನಾಟಕ ಉದ್ಘಾಟನೆಯಲ್ಲಿ ಡಿವೈಎಸ್ಪಿ ಗಿರೀಶ್ ಭೋಜಣ್ಣನವರ

ರಾಣೇಬೆನ್ನೂರು, ಫೆ. 18- ರಂಗಭೂಮಿ ಕಲಾ ಪ್ರತಿಭೆಗಳನ್ನು ಹುಟ್ಟುಹಾಕುವ ಒಂದು ವಿಶ್ವವಿದ್ಯಾಲಯವಿದ್ದಂತೆ, ನಿಜವಾದ ಕಲೆ ಅರಳುವುದೇ ರಂಗಭೂಮಿಯಿಂದ. ಡಾ. ರಾಜಕುಮಾರ್ ಅಂತಹ ಮಹಾನ್ ನಟನನ್ನು ಚಲನಚಿತ್ರ ಜಗತ್ತಿಗೆ ನೀಡಿದ್ದೇ  ರಂಗಭೂಮಿ ಎಂದು ಡಿವೈಎಸ್ಪಿ ಗಿರೀಶ್‌ ಭೋಜಣ್ಣನವರ ಹೇಳಿದರು. 

ತಾಲ್ಲೂಕಿನ ಹೊಸ ಮುಷ್ಟೂರು ಗ್ರಾಮದ ಶ್ರೀ ಚೌಡೇಶ್ವರಿ ಜಾತ್ರೆ ಪ್ರಯುಕ್ತ ದಾವಣಗೆರೆಯ ಹಿರಿಯ ರಂಗಭೂಮಿ ನಟಿ ಶ್ರೀಮತಿ ಭಾರತಿ ನೇತೃತ್ವದ ವಸಂತ ಕಲಾ ನಾಟ್ಯ ಸಂಘದವರು ಪ್ರದರ್ಶಿಸಿದ ‘ಸತಿ ಸಂಸಾರದ ಜ್ಯೋತಿ’ ಎಂಬ   ನಾಟಕ ಪ್ರದರ್ಶನದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಟಿ.ವಿ ಧಾರಾವಾಹಿ ಮತ್ತು ಸಿನಿಮಾ ಜಗತ್ತಿನ ಹಾವಳಿಯಿಂದ ರಂಗಭೂಮಿಯ ಕಲೆ ನಶಿಸುತ್ತಿದೆ, ಇದರಿಂದ ವೃತ್ತಿ ನಿರತ ಮತ್ತು ರಂಗಭೂಮಿಯನ್ನೇ ನಂಬಿದ ಕಲಾವಿದರ ಬದುಕು ಬರಡಾಗುತ್ತಿದೆ. ಸರ್ಕಾರಗಳು ಈ ಕಲಾವಿದರಿಗೆ ಆಸರೆಯಾಗುವಂತಹ, ರಂಗಕಲೆ ಉಳಿಯುವಂತಹ ಹೊಸ ಹೊಸ ಯೋಜನೆಗಳನ್ನು ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಮುಖಾಂತರ ಜಾರಿಗೆ ತರಬೇಕೆಂದರು. 

ಮುಖ್ಯ ಅತಿಥಿಯಾಗಿ ಆಗಮಿಸಿದ್ದ  ಗೋಲ್ಡನ್ ಹ್ಯಾಚರೀಸ್ ಪ್ರೈ.ಲಿ.ನ ಜನರಲ್ ಮ್ಯಾನೇಜರ್ ಎನ್. ಲೋಕೇಶ್ ಮಾತನಾಡಿ, ಜಾತ್ರೆಗಳು ಮಾನವ ಸಂಬಂಧಗಳನ್ನು ಬಲಿಷ್ಠಗೊಳಿಸಿ ಗ್ರಾಮೀಣ ಸೊಗಸು, ಸಂಸ್ಕಾರ, ಸಂಪ್ರದಾಯಗಳನ್ನು ವೃದ್ಧಿಗೊಳಿಸುತ್ತವೆ. ಎಂದರು. 

ಇದೇ ಸಂದರ್ಭದಲ್ಲಿ ಗೋಲ್ಡನ್ ಹ್ಯಾಚರೀಸ್ ಕಂಪನಿ ಎಚ್.ಆರ್.ಡಿ. ಭೀಮಪ್ಪ ಮತ್ತು ಗಣ್ಯ ವರ್ತಕ ಸಂತೋಷ ಪಿ. ಬಗಾಡೆಯವರ ಜನ್ಮ ದಿನವನ್ನು ಇದೇ ರಂಗಸಜ್ಜಿಕೆಯಲ್ಲಿ ಕೇಕ್ ಕಟ್ ಮಾಡುವ ಮೂಲಕ ಆಚರಿಸಲಾಯಿತು.  

ಮುಖ್ಯ ಅತಿಥಿಗಳಾಗಿ ಲ್ಯಾಂಡ್ ಟ್ರಿಬ್ಯೂನಲ್ ಕಮಿಟಿ  ನಾಮ ನಿರ್ದೇಶಿತ ಸದಸ್ಯ ಷಣ್ಮುಖಗೌಡ, ಸಣ್ಣ ಹನುಮನಗೌಡ್ರ, ಚಂದ್ರಣ್ಣ ಹೆಚ್.ಬೇಡರ, ಶಿದ್ದನಗೌಡ ಗೋವಿಂದಗೌಡ್ರ, ಈರಣ್ಣ ಹಲಗೇರಿ, ಬಸವರಾಜ ಕೊಂಗಿಯವರ, ಗುರಣ್ಣ ಉಪ್ಪಿನ,     ಸಂಗೀತ ನಿರ್ದೇಶಕ ಬಸವಣ್ಣೆಪ್ಪ ಡಿ. ದೇವರಮನಿ, ಹರಿಹರಗೌಡ ಪಾಟೀಲ, ಪ್ರಶಾಂತರಡ್ಡಿ ಯರೇಕುಪ್ಪಿ, ಬಸವರಾಜ ಯಲ್ಲಕ್ಕನವರ, ಚಳಗೇರಿ ಟೋಲ್ ಪ್ಲಾಜಾದ ಮ್ಯಾನೇಜರ್ ಹನಮಂತಪ್ಪ ಸಿ. ವೈ. ಮುಂತಾದವರು ಆಗಮಿಸಿದ್ದರು.

ಇದೇ ಸಂದರ್ಭದಲ್ಲಿ ಡಿ.ವೈ.ಎಸ್.ಪಿ ಗಿರೀಶ್‌ ಭೋಜಣ್ಣನವರು  ‘ಕರ್ಣ’ ಕನ್ನಡ ಚಲನಚಿತ್ರದ ‘ಆ ಕರ್ಣನಂತೆ ನೀ ದಾನಿಯಾದೆ’ ಎಂಬ ಹಾಡನ್ನು ಹಾಡಿ ನೆರೆದ ಜನತೆಯ ಹೃದಯ ಸ್ಪರ್ಶಿಸಿದರು.   

ಅಧ್ಯಕ್ಷತೆಯನ್ನು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ವಹಿಸಿದ್ದರು. ಕನ್ನಡ ಪ್ರಾಧ್ಯಾಪಕ ಶ್ರೀನಿವಾಸ ನಲವಾಗಲ  ಕಾರ್ಯಕ್ರಮ ನೆರವೇರಿಸಿಕೊಟ್ಟರು.

error: Content is protected !!