ನ್ಯಾಮತಿ, ಫೆ.12- ತಾಲ್ಲೂಕಿನ ಸವಳಂಗ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಐದು ವರ್ಷದ ಅವಧಿಗೆ ನಾಲ್ವರು ನಿರ್ದೇಶಕರ ಅವಿರೋಧ ಆಯ್ಕೆ ನಡೆದು ಎಂಟು ನಿರ್ದೇಶಕರು ಚುನಾವಣೆ ಮೂಲಕ ಆಯ್ಕೆಯಾಗಿರುವುದಾಗಿ ಚುನಾವಣಾ ಧಿಕಾರಿ ನವೀನ್ ಕುಮಾರ್ ಘೋಷಿಸಿದರು.
ಸವಳಂಗ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 342 ಸದಸ್ಯರನ್ನು ಹೊಂದಿದ್ದು, ಇದರಲ್ಲಿ 330 ಸದಸ್ಯರು ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದಾರೆ.
ಹಿಂದುಳಿದ `ಎ’ ಮೀಸಲು ಕ್ಷೇತ್ರದಿಂದ ಎನ್.ಸುರೇಶಾಚಾರಿ, `ಬ’ ಮೀಸಲು ಕ್ಷೇತ್ರದಿಂದ ಎಸ್.ಪ್ರಭುದೇವ್, ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಿಂದ ಎ.ಬಿ.ರಂಗಪ್ಪ, ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರಕ್ಕೆ ಎ.ಷಣ್ಮುಖಪ್ಪ ಇವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಉಳಿದ 8 ಸ್ಥಾನಕ್ಕೆ 23 ಅಭ್ಯರ್ಥಿಗಳು ಸ್ವರ್ಧಿಸಿದ್ದರು. ಸಾಮಾನ್ಯ ಕ್ಷೇತ್ರದಿಂದ ಎಂ.ಜಿ.ಕರಿಬಸಪ್ಪ, ಎಂ.ರಾಜಪ್ಪ, ಎಂ.ಜಿ.ಷಣ್ಮುಖಪ್ಪ, ಡಿ.ಹೆಚ್.ಲೋಕಪ್ಪ, ಮಹಿಳಾ ಮೀಸಲು ಕ್ಷೇತ್ರದಿಂದ ಯಶೋಧಮ್ಮ ಮಲ್ಲೇಶಪ್ಪ, ಕೆ.ಎಸ್.ವೀರಮ್ಮ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಶಾಂತಾನಾಯ್ಕ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ನವೀನ್ ಕುಮಾರ್ ಘೋಷಿಸಿ, ಪ್ರಮಾಣ ಪತ್ರ ವಿತರಿಸಿದರು. ಚುನಾವಣೆಯ ಕಾರ್ಯದಲ್ಲಿ ಕಾರ್ಯದರ್ಶಿ ಹೆಚ್.ಜಿ.ಗಣೇಶ್ ಸೇರಿದಂತೆ ಇತರರಿದ್ದರು.