ಎಲೆಬೇತೂರಿನಲ್ಲಿ ದೇವಸ್ಥಾನದ ಉದ್ಘಾಟನೆ, ಪ್ರತಿಷ್ಠಾಪನೆ ಇಂದು

ಎಲೆಬೇತೂರಿನಲ್ಲಿ ದೇವಸ್ಥಾನದ ಉದ್ಘಾಟನೆ, ಪ್ರತಿಷ್ಠಾಪನೆ ಇಂದು

ದಾವಣಗೆರೆ ಸಮೀಪದ ಎಲೆಬೇತೂರು ಗ್ರಾಮ ದಲ್ಲಿ ಶ್ರೀ ಮಾರಿಕಾಂಬಾ ದೇವಿ ದೇವಸ್ಥಾನದ ಉದ್ಘಾಟನೆ ಹಾಗೂ ದೇವಿಯ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಇಂದು ಮತ್ತು ನಾಳೆ  ಹಮ್ಮಿಕೊಳ್ಳಲಾಗಿದೆ.

ಇಂದು ಬೆಳಿಗ್ಗೆ ಶ್ರೀ ಮಾರಿಕಾಂಬಾ ದೇವಿಯನ್ನು ಮೆರವಣಿಗೆ ಮೂಲಕ ಬಾಜಾ ಭಜಂತ್ರಿಯೊಂದಿಗೆ ದೇವಸ್ಥಾನಕ್ಕೆ ಕರೆತರಲಾಗುವುದು. ಸಂಜೆ 6 ಗಂಟೆಗೆ ದೇವತೆಗೆ ಅದಿವಾಸ ಪೂಜೆ ಹಾಗೂ ವಾಸ್ತು ಮತ್ತು ದೇವತಾ ಪ್ರತಿಷ್ಠಾಂಗ ಹೋಮ ಜರುಗುವುದು. ನಾಳೆ ಮಂಗಳವಾರ ಬೆಳಿಗ್ಗೆ ದೇವಸ್ಥಾನ ಉದ್ಘಾ ಟನೆ, ದೇವಿಯ ಪ್ರತಿಷ್ಠಾಪನೆ ನಂತರ ಮಹಾಮಂಗಳಾರತಿ, ಕಳಸಾರೋಹಣ ಕಾರ್ಯಕ್ರಮ ಜರುಗುವುದು. ನಂತರ ಪ್ರಸಾದ ವಿತರಣೆ ನಡೆಯಲಿದೆ.

error: Content is protected !!