ಸೊರಟೂರು ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ

ಸೊರಟೂರು ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ

ನ್ಯಾಮತಿ, ಫೆ. 9- ಹೊನ್ನಾಳಿ ತಾಲ್ಲೂಕು ಸೊರಟೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 12 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದ ಹಾಲು ಉತ್ಪಾದಕರ ಸಂಘದಲ್ಲಿ 249 ಸದಸ್ಯತ್ವ ಹೊಂದಿದ ಮತದಾರರಿದ್ದು, 240 ಸದಸ್ಯರು ಮತ ಚಲಾಯಿಸಿದ್ದಾರೆ. ಸಂಘದ 12 ಕ್ಷೇತ್ರಗಳಿಗೆ 28 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಪರಿಶಿಷ್ಟ ಜಾತಿಯಲ್ಲಿ ಹೆಚ್.ಬಿ. ಬಸವರಾಜಪ್ಪ, ಪರಿಶಿಷ್ಟ ಪಂಗಡದ ಟಿ. ರವಿ ಎರಡು ಮಹಿಳಾ ಕ್ಷೇತ್ರದಿಂದ ಎಂ. ಅನಿತಾಬಾಯಿ, ಹೆಚ್. ಸುಮಂಗಳ, ಹಿಂದುಳಿದ ಆ ವರ್ಗದ ಶಾಂತವೀರಪ್ಪ, ಹಿಂದುಳಿದ ಬ ವರ್ಗದ ಸಂತೋಷ್ ಮಾಳಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಎ. ಶಿವಮೂರ್ತಿ, ಡಿ. ಆನಂದಪ್ಪ, ಹೆಚ್.ಪಾಲಾಕ್ಷಪ್ಪ, ಟಿ. ತಿಮ್ಮಪ್ಪ, ಗಿರಿಜಮ್ಮ, ಆರ್. ಶೇಖರಪ್ಪ ಆಯ್ಕೆಗೊಂಡಿದ್ದಾರೆಂದು ಚುನಾವಣಾಧಿಕಾರಿ ಕೆ.ಎನ್. ನವೀನ್ ಕುಮಾರ್ ತಿಳಿಸಿದ್ದಾರೆ. ಸೊರಟೂರು ಗ್ರಾ.ಪಂ. ಅಧ್ಯಕ್ಷ ಜಿ. ಬಸವನಗೌಡ ಪಾಟೀಲ್,  ಸೊರಟೂರು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಎಂ. ಬಸವನಗೌಡ, ಗ್ರಾಮದ ಮುಖಂಡರಾದ ಜಿ. ಬಸವನಗೌಡ, ನಿವೃತ್ತ ಶಿಕ್ಷಕ ಚಂದ್ರಪ್ಪ, ಹನುಮಂತಪ್ಪ, ಶ್ರೀನಿವಾಸ್ ಜೀನಹಳ್ಳಿ ಮತ್ತಿತರರಿದ್ದರು. 

error: Content is protected !!