ಕೊಕ್ಕನೂರಿನಲ್ಲಿ ಹೋಮ, ಶ್ರೀರಾಮ ದೀಪೋತ್ಸವ

ಕೊಕ್ಕನೂರಿನಲ್ಲಿ ಹೋಮ, ಶ್ರೀರಾಮ ದೀಪೋತ್ಸವ

ಮಲೇಬೆನ್ನೂರು, ಜ.22- ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಅಂಗವಾಗಿ ಸುಕ್ಷೇತ್ರ ಕೊಕ್ಕನೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮನ ಭಕ್ತ ಹನುಮಂತನಿಗೆ ಬೆಳಿಗ್ಗೆ 101 ಲೀಟರ್‌ ಹಾಲಿನ ಫಲ-ಪಂಚಾಮೃತ ಅಭಿಷೇಕದ ನಂತರ ಸ್ವರ್ಣ ಕವಚದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದೇವಸ್ಥಾನ ಆವರಣದಲ್ಲಿ ಶ್ರೀ ಪವನ ಗಣ ಹೋಮ, ಮೃತ್ಯುಂಜಯ ಹೋಮ, ಶ್ರೀ ರಾಮತಾರಕ ಹೋಮ, ನವಗ್ರಹ ಹೋಮಗಳನ್ನು ಮಾಡಿ ಪೂರ್ಣಾಹುತಿಯೊಂದಿಗೆ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ಕೋಸಂಬರಿ, ಪಾನಕ ಪ್ರಸಾದ ವಿತರಿಸಲಾಯಿತು. ಸಂಜೆ ಗ್ರಾಮದ ಮುಖ್ಯ ವೃತ್ತದಲ್ಲಿ ಶ್ರೀ ರಾಮನ ಬೃಹತ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾವಿರಾರು ದೀಪಗಳನ್ನು ಭಕ್ತರು ಶ್ರೀರಾಮ ದೀಪೋತ್ಸವ ಹಚ್ಚಿ ಆಚರಿಸಿದರು.

error: Content is protected !!