ದಾವಣಗೆರೆ, ಜ.18- ರಸ್ತೆ ಸುರಕ್ಷಾ ಸಪ್ತಾಹ 2024ರ ಅಂಗವಾಗಿ ನಗರದ ದಕ್ಷಿಣ ಸಂಚಾರ ಪೊಲೀಸರು, ಸಂಚಾರ ನಿಯಮಗಳ ಪಾಲನೆ ಜಾಗೃತಿ ಬಗ್ಗೆ ನೆಹರು ಯುವ ಕೇಂದ್ರ, ಸಮಾಜ ಕಾರ್ಯ ಅಧ್ಯಯನ ವಿಭಾಗ ದಾವಣಗೆರೆ ವಿವಿ ವಿದ್ಯಾರ್ಥಿಗಳ ಸಹಯೋಗದಲ್ಲಿ ರಸ್ತೆ ಸುರಕ್ಷಾ ಸಪ್ತಾಹ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಚಿತ್ರ ನಟ ಚಿಕ್ಕಣ್ಣ ಮಾತನಾಡಿ, ಎಲ್ಲಾ ವಾಹನ ಸವಾರರು ರಸ್ತೆ ಸುರಕ್ಷಾ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ದಕ್ಷಿಣ ಸಂಚಾರ ಪಿಎಸ್ಐ ಶ್ರೀಮತಿ ಶೈಲಜಾ, ಮಾಜಿ ಮೇಯರ್ ಅಜಯ್ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.