ನ್ಯಾಮತಿ, ಜ.17- ಕೃಷಿ ಇಲಾಖೆಯಿಂದ 2022- 23ನೇ ಸಾಲಿನ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ ಬೆಳೆ ಸ್ಪರ್ಧೆ ಯೋಜನೆಯಡಿ ಮಳೆಯಾಶ್ರಿತ ಶೇಂಗಾ ಬೆಳೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಮೊದಲ ಎರಡೂ ಸ್ಥಾನಗಳನ್ನು ಜಿಲ್ಲೆಯ ರೈತರು ತಮ್ಮದಾಗಿಸಿಕೊಂಡಿದ್ದಾರೆ.
ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಬೆಳಗುತ್ತಿ ಗ್ರಾಮದ ಲಕ್ಷ್ಮಮ್ಮ ಪ್ರತಿ ಹೆಕ್ಟೇರಿಗೆ 34.65 ಕ್ವಿಂಟಾಲ್ ಇಳುವರಿ ಪಡೆದು ಪ್ರಥಮ ಸ್ಥಾನ ಪಡೆದರೆ, ಅದೇ ತಾಲ್ಲೂಕಿನ ಬೀಜೋಗಟ್ಟಿ ಗ್ರಾಮದ ಪ್ರಭಾಕರ ರೆಡ್ಡಿ ಪ್ರತಿ ಹೆಕ್ಟೇರಿಗೆ 34.50 ಕ್ವಿಂಟಾಲ್ ಇಳುವರಿ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ.