ಮಳೆಯಾಶ್ರಿತ ಪ್ರದೇಶದಲ್ಲಿ ಸಮಗ್ರ ಕೃಷಿ ಅನುಸರಿಸಲು ಕರೆ

ಮಳೆಯಾಶ್ರಿತ ಪ್ರದೇಶದಲ್ಲಿ ಸಮಗ್ರ ಕೃಷಿ ಅನುಸರಿಸಲು ಕರೆ

ರಾಮತೀರ್ಥ ಗ್ರಾಮದಲ್ಲಿನ ತೊಗರಿ ಬೆಳೆ ಕ್ಷೇತ್ರೋತ್ಸವದಲ್ಲಿ ವಿಜ್ಞಾನಿ ಮಲ್ಲಿಕಾರ್ಜುನ್ 

ಹರಿಹರ, ಜ.2- ಹಂಗಾಮು ಬೆಳೆಗಳನ್ನು ಸೂಕ್ತ ತಾಂತ್ರಿಕತೆಗಳಿಂದ ಬೆಳೆಯುವುದರಿಂದ ರೈತರು ಅಧಿಕ ಲಾಭ ಪಡೆಯಬಹುದು ಎಂದು ತರಳಬಾಳು ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ  ಮಲ್ಲಿಕಾರ್ಜುನ್  ಸಲಹೆ ನೀಡಿದರು.

ತಾಲ್ಲೂಕಿನ ರಾಮತೀರ್ಥ ಗ್ರಾಮದ ರೈತರ ತಾಕಿನಲ್ಲಿ ಕೃಷಿ ಇಲಾಖೆ ವತಿಯಿಂದ ತೊಗರಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ  ಮುಖ್ಯ ಅತಿಥಿಗಳಾಗಿ ಭಾಗವಹಿಸಿ  ಅವರು ಮಾತನಾಡಿ,     ಮಳೆ ಆಶ್ರಿತ ಪ್ರದೇಶದಲ್ಲಿ  ಸಮಗ್ರ ಕೃಷಿ ಅನುಸರಿಸಿ ಅಧಿಕ ಲಾಭ ಪಡೆಯುವಂತೆ ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ನಾರನಗೌಡ ಎ. ಇವರು ಮಾತನಾಡುತ್ತಾ ರೈತರು ಬೆಳೆ ಪರಿವರ್ತನೆ ಹಾಗೂ ಬೆಳೆ ವೈವಿಧ್ಯತೆಗೆ ಗಮನ ಹರಿಸಬೇಕು. ಬೆಳೆ ಪರಿವರ್ತನೆಯಿಂದ ಮಣ್ಣಿನ ಫಲವತ್ತತೆಯನ್ನು ಕಾಪಾಡುವುದರ ಜೊತೆಗೆ ಕೆಲವು ಕಳೆಗಳನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು ತಿಳಿಸಿದರು. ರೈತರು ಪ್ರಮುಖವಾಗಿ ಮೆಕ್ಕೆಜೋಳದ ಬೆಳೆಯಲ್ಲಿ ಅಕ್ಕಡಿ ಬೆಳೆಯಾಗಿ ತೊಗರಿ ಬೆಳೆಯಲು ಕರೆ ನೀಡಿದರು. 

ಕೃಷಿ ಅಧಿಕಾರಿ ವಿಕಾಸ್ ಅವರು ರೈತರಿಗೆ ಕೃಷಿ ಇಲಾಖೆಯಲ್ಲಿ ವಿವಿಧ ಯೋಜನೆಗಳನ್ನು ವಿವರಿಸಿದರು. 

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಯೋಗೇಶ್‍ಗೌಡ ಮತ್ತು ಇತರರು ಭಾಗವಹಿಸಿದ್ದರು.

error: Content is protected !!