ಮನೆಯಲ್ಲಿ ಸರಳತೆ, ಪ್ರೀತಿ ವಿಶ್ವಾಸವಿರಲಿ

ಮನೆಯಲ್ಲಿ ಸರಳತೆ, ಪ್ರೀತಿ ವಿಶ್ವಾಸವಿರಲಿ

ಹೆಗ್ಗೆರೆ ಗ್ರಾಮದ ಕಾರ್ಯಕ್ರಮದಲ್ಲಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಭರಮಸಾಗರ, ಜ.2-  ಮನೆಯಲ್ಲಿ ಸರಳತೆ, ಪ್ರೀತಿ, ವಿಶ್ವಾಸ ಇದ್ದರೆ ಮನಸ್ಸೂ ಸಹ ಶಾಂತವಾಗಿರುತ್ತದೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ  ಸ್ವಾಮೀಜಿ ಹೇಳಿದರು.

ಇಲ್ಲಿನ ಹೆಗ್ಗೆರೆ ಗ್ರಾಮದ `ಶ್ರೀ ಧ್ವನಿ’ ನಿಲಯ ಗೃಹ ಪ್ರವೇಶದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದ  ಶ್ರೀಗಳು, ಚಿಕ್ಕ ಮನೆ ಕಟ್ಟಿ ಜೀವನ ನಡೆಸುವುದು ಸುಂದರವಾಗಿರುತ್ತದೆ. ಬಂಗಲೆ ಕಟ್ಟಿದರೆ ತೊಂದರೆಗಳೇ ಹೆಚ್ಚು ಎಂದರು. ಮನೆಯ ಯಜಮಾನ ಯವಾಗಲೂ ನಗುತ್ತಿರಬೇಕು. ಮನೆಗೆ ಯಾರೇ ಬಂದರೂ ಅವರನ್ನು ಪ್ರೀತಿ- ವಿಶ್ವಾಸ ದಿಂದ ವಿಚಾರಿಸಿಕೊಳ್ಳಬೇಕು. ಇದರಿಂದ ಆತ್ಮೀಯತೆ ಸಂಬಂಧಗಳು ಬೆಳೆಯುತ್ತವೆ ಎಂದು ನುಡಿದರು.

ಸಿರಿಗೆರೆ ಕಾಲೇಜಿನ ನಿವೃತ್ತ ಉಪನ್ಯಾಸಕ ಎ.ಜಿ. ಚಂದ್ರಶೇಖರ್, ಕೋಗುಂಡೆ ಮಂಜಣ್ಣ, ಡಿ.ಎಸ್. ಪ್ರದೀಪ್, ಹೆಗ್ಗೆರೆಯ ಹಿರಿಯ ಮುನಿಯಪ್ಪ  ಮಾತನಾಡಿದರು.

ಇದೇ ಸಂದರ್ಭದಲ್ಲಿ ಶ್ರೀಮತಿ ಟಿ.ಬನಶ್ರೀ,  ಎಚ್.ಡಿ. ಯೋಗೇಶ್ ದಂಪತಿಗಳು ಸಾಣೇಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ರಂಗ ಮಂದಿರಕ್ಕೆ 1 ಲಕ್ಷ  ರೂ. ದೇಣಿಗೆ ನೀಡಿದರು.  ಯೋಗ ಶಿಕ್ಷಕ ತಿಪ್ಪೇಸ್ವಾಮಿ ನಿರೂಪಿಸಿದರು. ನಾಗರಾಜ್ ವಂದಿಸಿದರು.

error: Content is protected !!