ಕಾಂತರಾಜ ವರದಿ ಜಾರಿಗೆ ಆಗ್ರಹಿಸಿ ಅಹಿಂದ ಪ್ರತಿಭಟನೆ

ಕಾಂತರಾಜ ವರದಿ ಜಾರಿಗೆ ಆಗ್ರಹಿಸಿ ಅಹಿಂದ ಪ್ರತಿಭಟನೆ

ಹೊನ್ನಾಳಿ, ಡಿ.29- ಕಾಂತರಾಜ ವರದಿಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ  ಎಚ್. ಎ. ಉಮಾಪತಿ  ಸರ್ಕಾರವನ್ನು  ಒತ್ತಾಯಿಸಿದರು. 

ಪಟ್ಟಣದ ವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲ್ಲೂಕು ಕಚೇರಿವರೆಗೆ ಘೋಷಣೆಗಳನ್ನು ಕೂಗುತ್ತಾ, ಅಹಿಂದ ತಾಲ್ಲೂಕು ಘಟಕದ ವತಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರಿಗೆ  ಮನವಿ ಸಲ್ಲಿಸಿ ಅವರು ಮಾತನಾಡಿದರು.

2014ರಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದಲ್ಲಿ ಕಾಂತರಾಜ ಅವರ ಅಧ್ಯಕ್ಷತೆಯಲ್ಲಿ ಸಮೀಕ್ಷೆಯನ್ನು ನಡೆಸಿದ್ದು, ಅದರಂತೆ ಆಯೋಗವು ಜಾತಿ ವರದಿಯನ್ನು ಸಿದ್ಧಪಡಿಸಿದ್ದು, ವಾಸ್ತವಿಕವಾಗಿ  ವರದಿ   ಎಲ್ಲ ಜನಾಂಗಗಳ ಆರ್ಥಿಕ ಸ್ಥಿತಿಗತಿಗಳ ಕುರಿತ ವರದಿಯಾಗಿದ್ದು,  ಅದನ್ನು ಸರ್ಕಾರ  ಇನ್ನೂ ಕೂಡ ಅಂಗೀಕರಿಸಿ ಜಾರಿಗೊಳಿಸಿಲ್ಲ. ವರದಿ ಏನು ಹೇಳುತ್ತಿದೆ ಎಂದು ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ, ಆಗಲೇ ಇತರೆ ಬಲಾಢ್ಯ ಸಮಾಜದವರು ಇದನ್ನು ವಿರೋಧಿಸುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಹೊನ್ನಾಳಿ ತಾಲ್ಲೂಕು ಅಹಿಂದ ಅಧ್ಯಕ್ಷ ಡಾ.ಈಶ್ವರ್ ನಾಯ್ಕ್ ಮಾತನಾಡಿ, ರಾಜ್ಯದ ಎಲ್ಲ ಜನಾಂಗದ ಹಿತವನ್ನು ಪರಿಗಣಿಸಿ ವೈಜ್ಞಾನಿಕವಾಗಿ ತಯಾರಿಸಲಾದ ವರದಿ ಇದಾಗಿದ್ದು, ಬೇಡವಾದವರಿಗೆ ಮೊಸರಲ್ಲಿ ಕಲ್ಲು ಎನ್ನುವಂತೆ ಕ್ಷುಲಕ ಕಾರಣಕ್ಕೆ ಈ ವರದಿಯನ್ನು ಅಲ್ಲಗಳೆಯುವುದು ಸರಿಯಲ್ಲ, ಸರ್ವ ಜನಾಂಗಗಳ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಗಾಗಿ ಈ ವರದಿ ಅಗತ್ಯವಾಗಿದ್ದು ಸರ್ಕಾರ ಇದನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಅಂಜುನಾಯ್ಕ್, ಬಾಬು ಹೋಬಳದಾರ್, ಮಾರಿಕೊಪ್ಪದ ಚಿನ್ನಪ್ಪ, ರಾಜು ಕಡಗಣ್ಣಾರ, ಕರವೇ ಮುಖಂಡರಾದ ಶ್ರೀನಿವಾಸ, ವಿನಯ್ ವಗ್ಗರ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಎಚ್.ಎಸ್. ರಂಜಿತ್,  ನಾಗರಾಜ್ ಮೂಳೆ, ದಲಿತ ಮುಖಂಡರಾದ ಎ.ಡಿ. ಈಶ್ವರಪ್ಪ, ದಿಡಗೂರು ತಮ್ಮಣ್ಣ, ಪರಮೇಶ್, ಮಂಜಪ್ಪ, ಪ್ರಭಾಕರ್, ಮುಕ್ತೇನಹಳ್ಳಿ ಹಾಲೇಶ್, ಬೇಲಿಮಲ್ಲೂರು ಶಿವಾನಂದ್, ಕ್ಯಾಸಿನಕೆರೆ ಶೇಖರಪ್ಪ, ಷಣ್ಮುಖಪ್ಪ, ಬೇಲಿಮಲ್ಲೂರು ನರಸಪ್ಪ, ದೇವಿಕುಮಾರ್, ಹನುಮಸಾಗರ ಮಂಜು, ಎಕ್ಕನಹಳ್ಳಿ ಪ್ರಕಾಶ್, ಮಹದೇವಪ್ಪ ಎಂಜಿನಿಯರ್, ಮರುಳಸಿದ್ದಪ್ಪ, ಭಾಷಾ, ನಸ್ರುಲ್ಲಾ, ಕುರುವ ಮಂಜು ಸೇರಿದಂತೆ, ಹಲವಾರು ಜನ ಅಹಿಂದ ಮುಖಂಡರು ಭಾಗವಹಿಸಿದ್ದರು.

error: Content is protected !!