ನನ್ನ ಪಾದಯಾತ್ರೆಗೆ ರಾಹುಲ್‌ರ ಭಾರತ್ ಜೋಡೋ ಪ್ರೇರಣೆ

ನನ್ನ ಪಾದಯಾತ್ರೆಗೆ ರಾಹುಲ್‌ರ ಭಾರತ್ ಜೋಡೋ ಪ್ರೇರಣೆ

ಹೊನ್ನಾಳಿಯಲ್ಲಿ ಕಾಂಗ್ರೆಸ್ ಮುಖಂಡ ಜಿ.ಬಿ. ವಿನಯ್ ಕುಮಾರ್

ಹೊನ್ನಾಳಿ, ಜ.2-  ಡಿಸೆಂಬರ್ 18 ರಿಂದ 98 ಹಳ್ಳಿಗಳನ್ನು ಸಂಚರಿಸಿ 280 ಕಿಲೋ ಮೀಟರ್ ತಮ್ಮ ಪಾದಯಾತ್ರೆ ಸಾಗಿದ್ದು, ಮಂಗ ಳವಾರ ಹೊನ್ನಾಳಿ ತಾಲ್ಲೂಕಿನ ಕೋಣನತಲೆ ಗ್ರಾಮದಿಂದ ಹೊನ್ನಾಳಿ ತಾಲ್ಲೂಕಿಗೆ `ವಿನಯ್ ನಡಿಗೆ ಹಳ್ಳಿಯ ಕಡೆಗೆ’ ಪಾದಯಾತ್ರೆಯ ಪ್ರವಾಸ ಮುಂದುವರೆಸಿರುವುದಾಗಿ ಕಾಂಗ್ರೆಸ್ ಮುಖಂಡ ಜಿ.ಬಿ. ವಿನಯ್ ಕುಮಾರ್ ತಿಳಿಸಿದರು.

ತಾಲ್ಲೂಕಿನ ಕೋಣನತಲೆ ಗ್ರಾಮದಿಂದ ಹಮ್ಮಿಕೊಂಡಿದ್ದ ಪಾದಯಾತ್ರೆಯ ಸಂದರ್ಭದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲ್ಲೂಕಿನಲ್ಲಿ ಇಂದಿನಿಂದ ಜನವರಿ 5 ರ ವರೆಗೆ 32 ಹಳ್ಳಿಗಳಲ್ಲಿ ಪಾದಯಾತ್ರೆ ಮುಂದುವರೆಯಲಿದೆ ಎಂದರು.

ಹೊನ್ನಾಳಿ  ತಾಲ್ಲೂಕಿನ ಅಹಿಂದ ಮುಖಂಡ ಎಚ್.ಎ. ಉಮಾಪತಿ ಮಾತನಾಡಿ, ರಾಜಕೀಯ ಪ್ರವೇಶದಲ್ಲಿ ವಿನಯ್ ಕುಮಾರ್ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಹೊನ್ನಾಳಿ  ಕಾಂಗ್ರೆಸ್ ಮುಖಂಡ ಅರಕ್ ಸಿದ್ದಪ್ಪ ಮಾತನಾಡಿ, ಸಮಾಜಮುಖಿ ಕೆಲಸ ಮಾಡುವವರಿಗೆ ರಾಜಕೀಯ ಅವಕಾಶ ಸಿಗುವಂತಾಗಬೇಕಿದೆ ಎಂದರು.

ಕೋಣನತಲೆಯಿಂದ ಪಾದಯಾತ್ರೆಯ ಮೂಲಕ ಹರಗನಹಳ್ಳಿ, ಹಿರೇಗೋಣಿಗೆರೆ, ಚಿಕ್ಕಗೋಣಿಗೆರೆ, ಕೋಟೆ ಮಲ್ಲೂರು, ಬೆಲೆಮಲ್ಲೂರು, ಗೊಲ್ಲರಹಳ್ಳಿ ಮಾರ್ಗವಾಗಿ ರಾತ್ರಿ 9 ಗಂಟೆಗೆ ಹೊನ್ನಾಳಿಯ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸ್ವಾಗತಿಸಲಾಯಿತು. ನಂತರ ಅವರು ಹೊನ್ನಾಳಿಯಲ್ಲಿ ವಾಸ್ತವ್ಯ ಮಾಡಿದರು.

ಈ ಸಂದರ್ಭದಲ್ಲಿ ತಾಲ್ಲೂಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎಚ್‌.ಬಿ. ಶಿವಯೋಗಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ  ರಂಜಿತ್, ಕರವೇ ಶ್ರೀನಿವಾಸ್, ಮಾದನಬಾವಿ ಕರಿಬಸಪ್ಪ, ಕೋಣನತಲೆ ಗ್ರಾಮ ಪಂಚಾಯಿತಿ ಸದಸ್ಯ ನಾಗೇಂದ್ರಪ್ಪ, ಗೋಣಿಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗಪ್ಪ ಹರಗನಹಳ್ಳಿ, ಮಾಲತೇಶ್, ಕರಿಯಪ್ಪ, ಪರಮೇಶ್ವರಪ್ಪ, ಗಿರಿಯಪ್ಪ ಗೋಣಿಗೆರೆ, ಕೆ. ಶಿವಮೂರ್ತಿ, ಗಂಗೋಜಿರಾವ್ ಹಿರೇಮಠ ಮುತ್ತು, ಪರಮೇಶ್ವರಪ್ಪ ಇನ್ನಿತರರಿದ್ದರು.

ವಿನಯ್‍ರವರ ಬುಧವಾರದ ಪಾದಯಾತ್ರೆಯು ಸುಂಕದಕಟ್ಟೆ ಅರಬಗಟ್ಟೆ, ನ್ಯಾಮತಿ ತಾಲ್ಲೂಕಿನ ಬಸವನಹಳ್ಳಿ ಮಾದನ ಬಾವಿ ಅರೇಹಳ್ಳಿ ಕೊಡಚಗೊಂಡನಹಳ್ಳಿ ಮೂಲಕ ನ್ಯಾಮತಿ ತಾಲ್ಲೂಕಿನ ಸುರಹೊನ್ನೆ ಗ್ರಾಮದಲ್ಲಿ ವಾಸ್ತವ್ಯ ಮಾಡಲಾಗುವುದು.

error: Content is protected !!