ಸೊರಟೂರು ಗ್ರಾ.ಪಂ. ಅಧ್ಯಕ್ಷರಾಗಿ ಜಿ. ಬಸವನಗೌಡ ಪಾಟೀಲ್ ಆಯ್ಕೆ

ಸೊರಟೂರು ಗ್ರಾ.ಪಂ. ಅಧ್ಯಕ್ಷರಾಗಿ  ಜಿ. ಬಸವನಗೌಡ ಪಾಟೀಲ್ ಆಯ್ಕೆ

ಹೊನ್ನಾಳಿ, ಡಿ. 19 – ಸೊರಟೂರು ಗ್ರಾ.ಪಂ. ಅಧ್ಯಕ್ಷರಾಗಿ ಜಿ. ಬಸವನಗೌಡ ಪಾಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವಿಶ್ವನಟೇಶ್ ಘೋಷಿಸಿದರು.

ಹಿಂದಿನ ಅಧ್ಯಕ್ಷರಾಗಿದ್ದ ಹನುಮಂತಪ್ಪ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಜಿ. ಬಸವನಗೌಡ ಪಾಟೀಲ್ ಆಯ್ಕೆಯಾಗಿದ್ದಾರೆ.  ಈ ಸಂದರ್ಭದಲ್ಲಿ ಶಾಸಕ ಡಿ.ಜಿ. ಶಾಂತನಗೌಡ, ಕಾಂಗ್ರೆಸ್ ಮುಖಂಡರುಗಳು ಮತ್ತು ಗ್ರಾಮಸ್ಥರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಮಾಜಿ ಅಧ್ಯಕ್ಷ ಹನುಮಂತಪ್ಪ, ಗ್ರಾ.ಪಂ. ಸದಸ್ಯ ಮರಿಯಪ್ಪ, ಪರಶುರಾಮ್‌ ರಾವ್, ವಿರೂಪಾಕ್ಷಪ್ಪ, ರಾಧಮ್ಮ, ನಾಗರತ್ನಬಾಯಿ, ಕೆಂಚಮ್ಮ, ಸುಮಾ, ರಂಜಿತಾ, ಪಿ.ಡಿ.ಒ. ಎನ್. ನಾಗರಾಜ್, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಕೆಂಗಲಹಳ್ಳಿ ಷಣ್ಮುಖಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಬಣ್ಣಜ್ಜಿ, ಕಾಂಗ್ರೆಸ್ ಮುಖಂಡರಾದ ಎಚ್.ಎ. ಉಮಾಪತಿ, ಬಿ. ಸಿದ್ದಪ್ಪ, ಅಮಿತ್ ಅರಕೆರೆ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!