ದೇಶಕ್ಕೆ ಅನ್ನ ನೀಡುವ ರೈತರ ಸಾಲ ಮನ್ನಾಕ್ಕೆ ಕೇಂದ್ರಕ್ಕೆ ಆಗ್ರಹ

ದೇಶಕ್ಕೆ ಅನ್ನ ನೀಡುವ ರೈತರ ಸಾಲ ಮನ್ನಾಕ್ಕೆ ಕೇಂದ್ರಕ್ಕೆ ಆಗ್ರಹ

ರೈತನ ಮಗನನ್ನು ಮದುವೆಯಾಗುವ ಹೆಣ್ಣಿಗೆ ಶೇ. 10 ಮೀಸಲಾತಿ 

ದೇಶಕ್ಕೆ ಅನ್ನ ನೀಡುವ ರೈತ ಕುಟುಂಬದ ಗಂಡು ಮಕ್ಕಳಿಗೆ ಪ್ರಸ್ತುತ ದಿನಗಳಲ್ಲಿ ಹೆಣ್ಣು ಕೊಡಲು ಯಾರೂ ಕೂಡ ಮುಂದೆ ಬರುತ್ತಿಲ್ಲ. ಈ ಕಾರಣದಿಂದ ರೈತರ ಮಗನನ್ನು ಮದುವೆಯಾಗಲು ಮುಂದೆ ಬರುವ ಹೆಣ್ಣು ಮಕ್ಕಳಿಗೆ ಅವರ ವಿದ್ಯಾರ್ಹತೆಗನುಗುಣವಾಗಿ ಸರ್ಕಾರಿ ಉದ್ಯೋಗದಲ್ಲಿ ಶೇಕಡ 10ರಷ್ಟು ಮೀಸಲಾತಿ ಸರ್ಕಾರಗಳು ಘೋಷಣೆ ಮಾಡಬೇಕು.

– ಬಲ್ಲೂರು ರವಿಕುಮಾರ್, ಕಾರ್ಯದರ್ಶಿ, ರಾಜ್ಯ ರೈತ ಸಂಘಗಳ ಒಕ್ಕೂಟ

ಹೊನ್ನಾಳಿ, ಡಿ.12- ಕೇಂದ್ರ ಸರ್ಕಾರ ದೇಶದ ಉದ್ಯಮಿಗಳ ರೂ. 11 ಲಕ್ಷ ಕೋಟಿ ಸಂಕಷ್ಟ ನೆರವು ಸಾಲ ಮನ್ನಾ ಮಾಡಿರುವ ರೀತಿಯಲ್ಲಿಯೇ ದೇಶದ 140 ಕೋಟಿ ಜನರಿಗೆ ಅನ್ನ ನೀಡುವ ರೈತ ಸಮುದಾಯದ ಸಾಲವನ್ನೂ ಕೂಡ ಮನ್ನಾ ಮಾಡಬೇಕು ಎಂದು ರಾಜ್ಯ ರೈತ ಸಂಘಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್‌ ಒತ್ತಾಯಪಡಿಸಿದರು. 

ಅವರು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ಒಕ್ಕೂಟದ ವತಿಯಿಂದ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀ ಯೇತರ) ರಾಜ್ಯ ರೈತ ಸಂಘಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘಗಳ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್‌ 23ರಂದು ವಿಶ್ವ ರೈತ ದಿನದಂದು ಬೆಂಗಳೂರಿನಲ್ಲಿ ರೈತರ ಮಹಾ ಅಧಿವೇಶನ ನಡೆ ಯಲಿದ್ದು, ಈ ಅಧಿವೇಶನದಲ್ಲಿ ರಾಜ್ಯ ರೈತ ಸಮು ದಾಯ ಸಮಗ್ರ ಸಮಸ್ಯೆಗಳು ಹಾಗೂ ಪರಿಹಾ ರೋಪಾಯಗಳ ಬಗ್ಗೆ ಸಮಗ್ರ ಚಿಂತನೆ ಮತ್ತು ಚರ್ಚೆಗಳು ನಡೆಯಲಿವೆ ಎಂದು ತಿಳಿಸಿದರು. 

ರೈತರು ಬರಗಾಲದ ಬೆಳೆ ನಷ್ಟದಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಬರ ಪರಿಹಾರ ನೀಡದೇ ನಿರ್ಲಕ್ಷ್ಯ ತೋರುತ್ತಿವೆ. ಕೂಡಲೇ ಬರ ಪರಿಹಾರದ ರೂಪದಲ್ಲಿ ಕೃಷಿ ಬೆಳೆಗೆ 35 ಸಾವಿರ ಹಾಗೂ ತೋಟಗಾರಿಕೆ ಬೆಳೆಗಳ ನಷ್ಟಕ್ಕೆ ಎಕರೆಗೆ 50 ಸಾವಿರ ಬರ ಪರಿಹಾರ ನೀಡಬೇಕು ಎಂದು ಒತ್ತಾಯಪಡಿಸಿದರು. 

ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು. ಸ್ವಾಮಿನಾಥನ್ ಆಯೋಗದ ವರದಿಯಂತೆ ಬೆಂಬಲ ಬೆಲೆ ನಿಗದಿಯಾಗಬೇಕು. ಕಬ್ಬಿನ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ಪ್ರತಿ ಟನ್‌ಗೆ ಉತ್ಪಾದನಾ ವೆಚ್ಚ ರೂ.3580 ಆಗಿದ್ದು, ಕೇಂದ್ರ ಸರ್ಕಾರ ನಿಗದಿ ಮಾಡಿರುವುದು  ರೂ. 3150. ಮಾತ್ರ ಕಬ್ಬಿನ ದರ ಕನಿಷ್ಟ ಟನ್‌ಗೆ ರೂ. 4 ಸಾವಿರ ನಿಗದಿಮಾಡಬೇಕು ಎಂದು ಹೇಳಿದರು. 

60 ವರ್ಷ ದಾಟಿದ ರೈತರಿಗೆ ಕನಿಷ್ಟ ರೂ. 5 ಸಾವಿರ ಪಿಂಚಣಿ ಯೋಜನೆ ಜಾರಿಗೆ ತರಬೇಕು, ದೆಹಲಿ ಮತ್ತು ರಾಜ್ಯದಲ್ಲಿ ಒಂದು ವರ್ಷಗಳ ಕಾಲ ಹೋರಾಟ ಮಾಡಿದ ರೈತರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕು 1971ರಿಂದ 2023ರವರೆಗೆ ಬಗರ್ ಹುಕ್ಕುಂ ನಮೂನೆ 50, 53, 57 ಕಲಂ ಅಡಿ ಸಾಗುವಳಿ ಮಾಡಿದ ರೈತರಿಗೆ ತುರ್ತಾಗಿ ಹಕ್ಕುಪತ್ರ ನೀಡ ಬೇಕು. ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡ ವವರಿಗೆ 94(ಸಿ) ಅಡಿಯಲ್ಲಿ ಹಕ್ಕುಪತ್ರ ಕೂಡಲೇ ನೀಡಬೇಕು ಎಂದು ಆಗ್ರಹಿಸಿದರು 

ಕೃಷಿ ಪಂಪಸೆಟ್‌ಗಳಿಗೆ ನೀಡುವ ಉಚಿತ ವಿದ್ಯುತ್ ತಪ್ಪಿಸಲು ವಿದ್ಯುತ್ ಖಾಸಗೀಕರಣ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು ರಾಜ್ಯ ಸರ್ಕಾರ 10 ಗಂಟೆ ವಿದ್ಯುತ್ ನೀಡಬೇಕು. ಬೆಳೆ ವಿಮೆ ಸರಿಯಾಗಿ ರೈತರಿಗೆ ತಲುಪುವಂತಾಗಲು ಬೆಳೆ ವಿಮಾ ನಿಯಮಾವಳಿಗಳನ್ನು ಸರಳೀಕರ ಣಗೊಳಿಸಬೇಕೆಂದು ಆವರು ಅಗ್ರಹಿಸಿದರು. 

ಎಸ್ಪಿ ಅಮಾನತ್ತುಗೊಳಿಸಬೇಕು : ಬೆಳಗಾವಿಯಲ್ಲಿ ನಡೆದ ಅಧಿವೇಶನದ ವೇಳೆ ಹಲವಾರು ಬೇಡಿಕೆಗಳ ಬಗ್ಗೆ ಮನವಿ ನೀಡಲು ಹೋಗಿದ್ದ ರೈತ ಸಮುದಾಯದ ವಿರುದ್ಧ ದರ್ಪ ಮೆರೆದ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿಯ ವರನ್ನು ಅಮಾನತ್ತು ಮಾಡಬೇಕು ಹಾಗೂ ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕು ಎಂದು ಬಲ್ಲೂರು ರವಿಕುಮಾರ್ ಸರ್ಕಾರಕ್ಕೆ ಒತ್ತಾಯಪಡಿಸಿದರು. 

ರೈತ ಸಂಘದ ಹೊನ್ನಾಳಿ ತಾಲ್ಲೂಕು ಅಧ್ಯಕ್ಷ ಕೆ.ಸಿ.ಬಸಪ್ಪ, ನ್ಯಾಮತಿ ತಾಲ್ಲೂಕು ಅಧ್ಯಕ್ಷ ಬೆಳಗುತ್ತಿ ಉಮೇಶ್ ರೈತರ ಸಮಸ್ಯೆಗಳ ಕುರಿತು ಮಾತನಾಡಿದರು. 

ಸುದ್ದಿಗೋಷ್ಟಿಯಲ್ಲಿ ರೈತ ಮುಖಂಡರಾದ ಸುಂಕದಕಟ್ಟೆ ಕರಿಬಸಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ನಂದಿತಾವರೆ ಮುರುಗೇಂದ್ರಯ್ಯ, ಜಿಲ್ಲಾ ಮುಖಂಡ ಅಂಜಿನಪ್ಪ, ಕೊಮಾರನಹಳ್ಳಿ ಮಂಜುನಾಥ್‌, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!