ಚನ್ನಗಿರಿ, ಡಿ.12- ಅಖಿಲ ಭಾರತ ವಿಶ್ವಕರ್ಮ ಪರಿಷತ್ ಹಾಗೂ ವಡ್ನಾಳ್ ಶ್ರೀಮಠ, ವಿಶ್ವಕರ್ಮ ಸಮಾಜ ಮತ್ತು ಸಂಘ -ಸಂಸ್ಥೆಗಳು, ಲಯನ್ಸ್ ಕ್ಲಬ್ ಇವರುಗಳ ಸಂಯುಕ್ತಾಶ್ರಯದಲ್ಲಿ ತಾಲ್ಲೂಕಿನ ಕಾಶಿಮಠ, ವಡ್ನಾಳ್ನಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.
ಅಷ್ಟೋತ್ತರ ಶತ ಶ್ರೀ ಶಂಕರಾತ್ಮಾನಂದ ಸರಸ್ವತಿ ಇವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ವಿಶ್ವಕರ್ಮ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಈ. ಮೌನೇಶ್ವರಚಾರಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾಧ್ಯಕ್ಷ ಆರ್. ಪ್ರಸನ್ನ ಕುಮಾರ್, ಚನ್ನಗಿರಿ ತಾಲ್ಲೂಕು ವಿಶ್ವಕರ್ಮ ಸಮಾಜದ ತಾಲ್ಲೂಕು ಅಧ್ಯಕ್ಷ ಅಮ್ಮನಗುಡ್ಡದ ಪೂಜಾರ್, ಜಯಾಚಾರ್ ಹಿರೇಮೇಗಳಗೆರೆ, ಕೆ. ಸೋಮಶೇಖರಾಚಾರಿ, ಕಾಡಜ್ಜಿ ಜಿ.ಕಾಳಾಚಾರ್, ಬಾವಿಹಾಳ್ ನಾಗರಾಜಚಾರಿ, ಪಿ.ಮಹಾರುದ್ರಚಾರ್, ಎಲ್.ಟಿ. ವೀರೇಶ್ ಆಚಾರ್, ಗಾಯತ್ರಿ ಚಿತ್ರದುರ್ಗ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.