ನಾಗರಿಕ ಬಂದೂಕು ತರಬೇತಿ ಶಿಬಿರಕ್ಕೆ ಚಾಲನೆ

ನಾಗರಿಕ ಬಂದೂಕು ತರಬೇತಿ ಶಿಬಿರಕ್ಕೆ ಚಾಲನೆ

ದಾವಣಗೆರೆ, ಡಿ. 5- ನಗರದ ಡಿ.ಎ.ಆರ್. ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಾಗರಿಕ ಬಂದೂಕು ತರಬೇತಿ ಶಿಬಿರ ನಡೆಯಿತು. ಶಿಬಿರಕ್ಕೆ ಬಿ.ಡಿವೈಎಸ್ಪಿ ಪ್ರಕಾಶ್ ಪಿ. ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ವೇದಿಕೆಯಲ್ಲಿ ಸೋಮಶೇಖರಪ್ಪ ಹೆಚ್. ಬಿ.ಆರ್.ಪಿ.ಐ. ಮಹೇಶ್ ಪಾಟೀಲ್, ಆರ್‌ಎಸ್‌ಐ ನವೀನ್, ಎನ್‌ಎಆರ್‌ಎಸ್‌ಐ ಸಿಬ್ಬಂದಿಗಳಾದ ಬಸವರಾಜ್ ಟಿ, ಪುಟ್ಟಪ್ಪ ಬಿ.ಎಸ್., ಕೆ.ಪಿ. ಶರತ್ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಹತ್ತು ದಿನಗಳ ಕಾಲ ನಾಗರಿಕ ಬಂದೂಕು ತರಬೇತಿಯನ್ನು ಡಿ.ಎ.ಆರ್. ಮೈದಾನದಲ್ಲಿ ಪಡೆಯಲಿದ್ದಾರೆ.

error: Content is protected !!