ಹರಿಹರದಲ್ಲಿ `ಶ್ರೀಶೈಲ ಉತ್ಸವ’

ಹರಿಹರದಲ್ಲಿ `ಶ್ರೀಶೈಲ ಉತ್ಸವ’

ಹರಿಹರ, ಡಿ.5- ಶ್ರೀಶೈಲ ಜಗದ್ಗುರುಗಳವರ ಜನ್ಮ ದಿನ ಮತ್ತು ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಶ್ರೀಶೈಲ ಹೈಟೆಕ್ ಪಿ.ಯು ಕಾಲೇಜಿನಲ್ಲಿ ನಡೆದ `ಶ್ರೀಶೈಲ ಉತ್ಸವ-2023′ ಜಿಲ್ಲಾ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭವನ್ನು ಶಾಸಕ ಬಿ.ಪಿ.ಹರೀಶ್ ಅವರು ಉದ್ಘಾಟಿಸಿದರು.  

ಜೀ ಟಿವಿಯ ಡಿಕೆಡಿ ಕಾರ್ಯಕ್ರಮದ ಡ್ಯಾನ್ಸ್ ಮಾಸ್ಟರ್ ರುದ್ರ ಮತ್ತು  ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ್ ದುಗ್ಗತ್ತಿಮಠ್ ಮಾತನಾಡಿದರು. 

ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಡಿ.ಎಂ.ಹಾಲಸ್ವಾಮಿ, ಯುವ ಉದ್ಯಮಿ ಶ್ರೀನಿವಾಸ್ ಶಿವಗಂಗಾ, ಸಿ.ಆರ್.ಪಿ. ತಿಪ್ಪೇಸ್ವಾಮಿ, ಮಂಜುಸ್ವಾಮಿ, ನಿರ್ದೇಶಕರಾದ ಎನ್.ಎಂ.ತಿಪ್ಪೇಸ್ವಾಮಿ, ಕೆ.ಎಂ.ಪರಮೇಶ್ವರಯ್ಯ, ಡಿ.ಜಿ.ಶಿವಾನಂದಪ್ಪ, ಕೃಷ್ಣ ನಾಯಕ್, ಎನ್.ಹೆಚ್.ಪಾಟೀಲ್ ಮಲ್ಲಿಕಾರ್ಜುನ, ನಿ.ಪ್ರಾಚಾರ್ಯರಾದ ಡಾ.ಎಸ್.ಎಚ್.ಪ್ಯಾಟಿ ಮತ್ತಿತರರು ಉಪಸ್ಥಿತರಿದ್ದರು.  

error: Content is protected !!