ಮಾತೃಭಾಷೆಯನ್ನು ಪ್ರೀತಿಸಿ, ಬೆಳೆಸಬೇಕು : ಡಾ. ನೀತಾ

ಮಾತೃಭಾಷೆಯನ್ನು ಪ್ರೀತಿಸಿ, ಬೆಳೆಸಬೇಕು : ಡಾ. ನೀತಾ

ದಾವಣಗೆರೆ, ಡಿ.4- ಆವರಗೆರೆಯ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಶ್ರೀ ಗುರು ಪಂಚಾಕ್ಷರಿ ಗವಾಯಿ ಮೆಮೋರಿಯಲ್ ಕಾಂಪೋಜಿಟ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಸಂಭ್ರಮ ನಡೆಯಿತು.

ಬಾಪೂಜಿ ವಿದ್ಯಾಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಡಾ. ಎ.ಜೆ. ನೀತಾ  ಕಾರ್ಯಕ್ರಮವನ್ನು ಉದ್ದೇಶಿಸಿ, ನಮ್ಮ ಭಾಷೆ ನಮ್ಮ ಹೆಮ್ಮೆ, ಮಾತೃ ಭಾಷೆಯನ್ನು ಪ್ರೀತಿಸಬೇಕು, ಬೆಳೆಸಬೇಕು, ಬೇರೆ ಭಾಷೆಯನ್ನು ವ್ಯಾವಹಾರಿಕವಾಗಿ ಬಳಸಬೇಕು ಎಂದು ಮಾತೃಭಾಷೆ ಕನ್ನಡದ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.

ತೆಲಗಿಯ ಕೆ.ಎಸ್. ವೀರಭದ್ರಪ್ಪ ಮಾತನಾಡಿ, ದಿನದ 24 ಗಂಟೆಯೂ ನಮ್ಮ ಉಸಿರಿನಲ್ಲಿ ಕನ್ನಡ ಬೆರೆತಿರಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸ್ಫೂರ್ತಿ ಪ್ರಕಾಶನ ಸಂಸ್ಥೆಯ ಅಧ್ಯಕ್ಷ ಎಂ. ಬಸವರಾಜ್,  ಕನ್ನಡ, ನಾಡು, ನುಡಿ ಹಾಗೂ ಮಕ್ಕಳ ದಿನಾಚರಣೆಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಎ.ಹೆಚ್. ಸುಗ್ಗಲಾದೇವಿ, ಕನ್ನಡ ಭಾಷೆಯ ಹಿರಿಮೆಗಳ ಕುರಿತು ಹಾಗೂ ಮಾತೃಭಾಷೆಯನ್ನು ಪೋಷಿಸಬೇಕು, ಬೆಳೆಸಬೇಕು ಎಂದರು.

ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಎ.ಹೆಚ್. ಲಕ್ಷ್ಮೀ ಛಾಯಾ ಅವರು  ಕಾರ್ಯಕ್ರಮವನ್ನು ಉದ್ಘಾಟಿಸಿದರು. 8ನೇ ತರಗತಿಯ ವಿದ್ಯಾರ್ಥಿನಿ ಕೆ.ಬಿ. ಗುಣಶೀಲ ನಿರೂಪಿಸಿದರು. ಡಿ. ಇಂಚರ ಸ್ವಾಗತಿಸಿದರು. ಎಸ್. ಸ್ಫೂರ್ತಿ ವಂದಿಸಿದರು.

error: Content is protected !!