ದಾವಣಗೆರೆ, ನ. 30-ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ರಾಷ್ಟ್ರಪತಿ ಸ್ಕೌಟ್ ವಿದ್ಯಾರ್ಥಿ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ರಾಷ್ಟ್ರ ರಕ್ಷಣೆಯ ಕಾರ್ಯದಲ್ಲಿ ಹುತಾತ್ಮರಾಗಿದ್ದು, ಅಗಲಿದ ವೀರ ಯೋಧನಿಗೆ ಶ್ರೀಮಾತಾ ವಿದ್ಯಾಸಂಸ್ಥೆ ನಂದಗೋಕುಲ ಆಂಗ್ಲ ಮಾಧ್ಯಮ ನರ್ಸರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ವೈ.ಬಿ. ಸತೀಶ್, ಕಾರ್ಯದರ್ಶಿ ಶ್ರೀಮತಿ ಬಿ. ಅನುಸೂಯ, ಮುಖ್ಯ ಶಿಕ್ಷಕಿ ಶ್ರೀಮತಿ ರೆಹಾನಾ ಬಾನು ನಾಸಿಕ ಹಾಗೂ ಯುವ ಸಮಿತಿ ಅಧ್ಯಕ್ಷ ಮುಸ್ತಫಾ ರಜಾ, ಶಿಕ್ಷಕ ವೃಂದದವರು, ಸ್ಕೌಟ್, ಗೈಡ್, ಬುಲ್ ಬುಲ್ ಹಾಗೂ ಕಬ್ಸ್ ವಿದ್ಯಾರ್ಥಿಗಳು ನಮನ ಸಲ್ಲಿಸಿದರು.