ಹರಿಹರ ತಾಲ್ಲೂಕಿನ ಕುಣಿಬೆಳಕೆರೆ ಗ್ರಾಮದ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ದೊಡ್ಡ ಎಡೆ ಮಹೋತ್ಸವದ ಕಾರ್ಯಕ್ರಮಗಳು ನಾಳೆ ರಾತ್ರಿ 8 ಗಂಟೆಗೆ ಸ್ವಾಮಿಗೆ ಹೂವಿನ ಅಲಂಕಾರ, ಡೊಳ್ಳಿನ ಪದಗಳೊಂದಿಗೆ ವಿಶೇಷ ಪೂಜೆ ನೆರವೇರುವುದು.
ನಾಡಿದ್ದು ದಿನಾಂಕ 24ರ ಶುಕ್ರವಾರ ಬೆಳಿಗ್ಗೆ 5 ಗಂಟೆಗೆ ಸ್ವಾಮಿಗೆ ಯಥಾಪ್ರಕಾರ ವಿಶೇಷ ಪೂಜೆ ನಡೆಯಲಿದೆ. ನಂತರ ಬೆಳಿಗ್ಗೆ 9.30 ರಿಂದ ದೇವಸ್ಥಾನದ ಆವರಣದಲ್ಲಿ ಉಚಿತ ಸಾಮೂಹಿಕ ವಿವಾಹವು ಜರುಗುವುವು. ನಂತರ 10-30ಕ್ಕೆ ದೇವಸ್ಥಾನದ ಪೂಜಾರ್ (ಈರಗಾರರು) ಇವರಿಂದ ಶ್ರದ್ಧಾ, ಭಕ್ತಿಯಿಂದ ಸ್ವಾಮಿಗೆ ದೊಡ್ಡಎಡೆಯನ್ನು ಹಾಕಲಾಗುವುದು. ಮಧ್ಯಾಹ್ನ 12 ರಿಂದ ಸ್ವಾಮಿಯ ದೊಡ್ಡಎಡೆಯ ಪ್ರಸಾದ ವನ್ನು ಸರ್ವ ಭಕ್ತಾದಿಗಳು ಸ್ವೀಕರಿಸಬೇಕೆಂದು ದೇವಸ್ಥಾನದ ಧರ್ಮದರ್ಶಿಗಳು ತಿಳಿಸಿದ್ದಾರೆ.