ಓಸಿ, ಇಸ್ಪೀಟ್ ವ್ಯಾಪಕ
ಹೊನ್ನಾಳಿ ತಾಲ್ಲೂಕಿನಲ್ಲಿ ಒಸಿ, ಇಸ್ಪೀಟ್ ವ್ಯಾಪಕವಾಗಿ ನಡೆಯುತ್ತಿದ್ದು, ತಕ್ಷಣ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳ ಬೇಕು.ಇಲ್ಲವಾದಲ್ಲಿ ಈ ವಿಷಯವಾಗಿ ಡಿಜಿ ಬಳಿ ಹೋಗುವೆ.
-ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವರು
ಹೊನ್ನಾಳಿ, ನ.22- ನ್ಯಾಮತಿ-ಹೊನ್ನಾಳಿ ಅವಳಿ ತಾಲ್ಲೂಕಿನಲ್ಲಿ ಮರಳು ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ಬೆಂಬಲರಿಗೆ ಮಾತ್ರ ದೊರೆಯು ವಂತಾಗಿದ್ದು, ಇದು ಮುಂದುವರೆದರೆ ಸಾರ್ವ ಜನಿಕರ ಹಿತದೃಷ್ಟಿ ಯಿಂದ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದರು.
ತಮ್ಮ ನಿವಾಸದಲ್ಲಿ ನಿನ್ನೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಮರಳು ಪಕ್ಷಾತೀತವಾಗಿ ಹಾಗೂ ಎಲ್ಲಾ ಸಾಮಾನ್ಯ ಜನರಿಗೆ ದೊರೆಯಬೇಕು. ನನ್ನ ಅಧಿಕಾರವಧಿಯಲ್ಲಿ ಒಂದು ಟ್ರ್ಯಾಕ್ಟರ್ ಮರಳಿಗೆ 5 ಸಾವಿರ ರೂ.ಗೆ ದೊರೆಯುತ್ತಿತ್ತು. ಈಗ ಒಂದು ಟ್ರ್ಯಾಕ್ಟರ್ ಮರಳಿಗೆ 10 ಸಾವಿರ ರೂ. ಕೊಡಬೇ ಕಾಗಿದೆ. ಬಡವರಿಗೆ ಹಾಗು ಆರ್ಥಿಕವಾಗಿ ಹಿಂದುಳಿದವರು ಮನೆ ಕಟ್ಟಲು ಮರಳು ದೊರೆಯುತ್ತಿಲ್ಲ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನಲ್ಲಿ ಮರಳು ಮಾಫಿಯ ನಡೆಯುತ್ತಿದೆ ಟ್ರಾಕ್ಟರ್ ಸಂಖ್ಯೆಗೆ ಅನು ಗುಣವಾಗಿ ಮರಳು ದಂಧೆ ನಡೆಸಿದ್ದಾರೆ ಎಂದ ಅವರು, ಕಾಂಗ್ರೆಸ್ನವರ ಟ್ರಾಕ್ಟರ್ಗಳಾಗಿದ್ದರೆ ಅಧಿಕಾರಿಗಳು ಅವರ ಟ್ರ್ಯಾಕ್ಟರ್ ಸಂಖ್ಯೆಗಳನ್ನು ಗುರ್ತಿಸಿ ಬಿಡುವಂ ತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮರಳಿನ ಟ್ರ್ಯಾಕ್ಟರ್ಗಳ ಸಂಖ್ಯೆ ಗಳ ಸಂಕೇತದ ಮೂಲಕ ವ್ಯವಹಾರ ನಡೆಯುತ್ತಿದೆ ಎಂದರು.
ನಾನು ಅಧಿಕಾರದಲ್ಲಿದ್ದಾಗ ಬಡವರಿಗೆ ಮುಕ್ತವಾಗಿ ಮರಳು ಸಿಗುತ್ತಿತ್ತು, ಹಾಗೂ ಸರ್ಕಾರಿ ಕಟ್ಟಡಗಳಿಗೂ ಮರಳು ಸಿಗುತ್ತಿತ್ತು, ಆದರೆ ಈಗ ಸರ್ಕಾರಿ ಕಟ್ಟಡಗಳಿಗೆ ಎಂ ಸ್ಯಾಂಡ್ ಮರಳನ್ನು ಬೆರೆಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಾ ದೂರುಗಳನ್ನು ಕೇಳಿ ನಾನು ಸುಮ್ಮನೆ ಕುಳಿತುಕೊಳ್ಳವುದಿಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ನೀಡುವ ಸಹಾಯಧನ ನಿಲ್ಲಿಸಿರುವುದಲ್ಲದೆ ಅನುದಾನ ನೀಡುವುದನ್ನು ನಿಲ್ಲಿಸಿದ್ದಾರೆ ಇದರಿಂದ ಸಣ್ಣ ರೈತರಿಗೆ ತೀವ್ರವಾದ ತೊಂದರೆಯಾಗುತ್ತದೆ ಎಂದು ಹೇಳಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಮುಖಂಡರಾದ ಎಂ.ಎಸ್.ಪಾಲಾಕ್ಷಪ್ಪ, ಧರ್ಮಪ್ಪ, ಬೀರಪ್ಪ, ಸಿ.ಆರ್.ಶಿವಾನಂದ್, ದಿಡಗೂರು ಪಾಲಕ್ಷಪ್ಪ, ಪಲ್ಲವಿ ರಾಜು, ಮಹೇಶ್ ಹುಡೇದ್, ಅರಕೇರಿ ನಾಗರಾಜ್, ಕುಮಾರ ಸ್ವಾಮಿ ಇನ್ನಿತರರಿದ್ದರು.