ದಾವಣಗೆರೆ ನ. 22 – ನಗರದ ಹೆಸರಾಂತ ಮಾಜಿ ಸಚಿವರಾದ ಎಸ್. ಎ ರವೀಂದ್ರನಾಥ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಜನ್ಮ ದಿನೋತ್ಸವದ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಇದೇ 26 ರಂದು ಬೆಳಿಗ್ಗೆ 11ಕ್ಕೆ ನಗರದ ಶಿರಮಗೊಂಡನಹಳ್ಳಿಯ ಶ್ರೀಮತಿ ಸುಧಾ ವೀರೇಂದ್ರ ಪಾಟೀಲ್ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಸಂಜೆ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ 5.45ಕ್ಕೆ ಹುಬ್ಬಳ್ಳಿಯ ಕಲಾಸುಜಯ ಸಂಸ್ಥೆಯಿಂದ ದೇಶ ಪ್ರೇಮ ಪ್ರಚುರ ಪಡಿಸುವ ವೀರಭಾರತಿ ನೃತ್ಯರೂಪಕ ಪ್ರದರ್ಶನ ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ತಾವು ಗಳೆಲ್ಲ ಆಗಮಿಸಿ, ಶುಭ ಕೋರಬೇಕಾಗಿ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಅತಿಥ್ ಅಂಬರ್ಕರ್ ಕೋರಿದ್ದಾರೆ.
December 27, 2024