ಜಿಗಳಿ ಕ್ಯಾಂಪ್‌ನಲ್ಲಿ ನಾಳೆ ಶ್ರೀ ಕೋದಂಡರಾಮ ವಿಗ್ರಹ ಪುನರ್ ಪ್ರತಿಷ್ಟಾಪನೆ : ಸೀತಾರಾಮ ಕಲ್ಯಾಣ

ಜಿಗಳಿ ಕ್ಯಾಂಪ್‌ನಲ್ಲಿ ನಾಳೆ ಶ್ರೀ ಕೋದಂಡರಾಮ ವಿಗ್ರಹ ಪುನರ್ ಪ್ರತಿಷ್ಟಾಪನೆ : ಸೀತಾರಾಮ ಕಲ್ಯಾಣ

ಮಲೇಬೆನ್ನೂರು, ನ.21- ವಿನಾಯಕ ನಗರ (ಜಿಗಳಿ ಕ್ಯಾಂಪ್) ಕ್ಯಾಂಪ್‌ನಲ್ಲಿರುವ ಕೋದಂಡ ರಾಮಾಂಜನೇಯ ಸ್ವಾಮಿ ದೇವಸ್ಥಾನ ದಲ್ಲಿ ನಾಡಿದ್ದು ದಿನಾಂಕ 23ರ ಗುರುವಾರ ಶ್ರೀ ಕೋಂದಡರಾಮ ಸ್ವಾಮಿಯ ವಿಗ್ರಹ ಪುನರ್ ಪ್ರತಿಷ್ಠಾಪನೆ ಮಾಡಲಾಗುವುದು.

ಈ ಕಾರ್ಯಕ್ರಮದ ಅಂಗವಾಗಿ ಸೋಮವಾರ ಹರಿಹರದ ತುಂಗಭದ್ರಾ ನದಿಯಲ್ಲಿ ಮೂಲ ವಿಗ್ರಹಗಳಿಗೆ ಸ್ನಾನ ಮಾಡಿಸಿ, ಅದೇ ದಿನ ರಾತ್ರಿ ಪ್ರತಿಷ್ಠಾಪನೆ ಪೂಜೆಯನ್ನು ಮಾಡಲಾಯಿತು.

ಮಂಗಳವಾರ ಬೆಳಿಗ್ಗೆ ವಿಘ್ನೇಶ್ವರ ಪೂಜೆ, ಪುಣ್ಯ ವಾಚನ, ಗೋ ಪೂಜೆ, ಮಹಾಸಂಕಲ್ಪ, ಋತ್ವಿಕೆ ವರುಣ, ದೀಕ್ಷಾಧಾರಣ, ಪಂಚಗವ್ಯ ಪ್ರಸಾನ, ರಕ್ಷ ಬಂಧನ, ಧ್ವಜಾರೋಹಣ, ಯಾಗ ಶಾಲಾ ಪ್ರವೇಶ, ನವಗ್ರಹ, ವಾಸ್ತು ಪ್ರಧಾನ ಕಳಸ ದೇವತ ಆಹ್ವಾನ ಪೂಜಾ, ಯಂತ್ರ ಅಭಿಷೇಕ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.

ಸಂಜೆ ಆಹ್ವಾಯುತ ದೇವತಾ ಪೂಜೆ, ವಿಗ್ರಹ ಅಧಿವಾಸ, ಕ್ಷೀರಾಭ್ದಿವಾಸ, ಮತ್ಸಂಗ್ರಹಣ, ಸರ್ವತೋ ಭದ್ರ ಮಂಡಲ, ದೇವತ ಆಹ್ವಾನ, ಯಾಗ ಮಂದಿರ ಪೂಜಾ, ಅಂಕುರರೋಹಣ, ಅಗ್ನಿ ಪ್ರತಿಷ್ಠೆಯೊಂದಿಗೆ ಮಹಾಮಂಗಳಾರತಿ ಮಾಡಿ, ತೀರ್ಥ – ಪ್ರಸಾದ ವಿತರಿಸಲಾಯಿತು.

ದಿನಾಂಕ 22ರ ಬುಧವಾರ ಬೆಳಿಗ್ಗೆ ವಿವಿಧ ಪೂಜೆಗಳ ನಂತರ ಸುದರ್ಶನ ಹೋಮ, ನವಗ್ರಹ ಹೋಮದ ನಂತರ ಮಧ್ಯಾಹ್ನ 3 ಗಂಟೆಯಿಂದ ಗ್ರಾಮದಲ್ಲಿ ನೂತನ ವಿಗ್ರಹದ ಮೆರವಣಿಗೆ ನಡೆಯಲಿದೆ.  ರಾತ್ರಿ 8 ಗಂಟೆಗೆ ಮುತ್ತೈದೆಯರಿಂದ ಶ್ರೀರಾಮ, ಲಕ್ಷ್ಮಿ, ಆಂಜನೇಯ ಸಹಸ್ರರಾರು, ಅರ್ಚನೆ, ಕುಂಕುಮ ಪೂಜೆ ನೆರವೇರಲಿದೆ. ದಿನಾಂಕ 23ರ ಗುರುವಾರ ಬೆಳಿಗ್ಗೆ ವಿವಿಧ ಪೂಜೆಗಳ ನಂತರ 11.24ಕ್ಕೆ ಶ್ರೀ ಕೋದಂಡ ರಾಮ ಸ್ವಾಮಿ ವಿಗ್ರಹ ಪುನರ್ ಪ್ರತಿಷ್ಠಾಪನೆಗೊಳ್ಳುವುದು. ನಂತರ ಸೀತಾರಾಮ ಕಲ್ಯಾಣೋತ್ಸವ ಹಾಗೂ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಈ ಮೂರು ದಿನವೂ ಮಧ್ಯಾಹ್ನ, ರಾತ್ರಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

error: Content is protected !!