ಕೊನಾಯಕನಹಳ್ಳಿ ದುರ್ಗಮ್ಮ ದೇವಿ ಕಳಸಾರೋಹಣ

ಕೊನಾಯಕನಹಳ್ಳಿ ದುರ್ಗಮ್ಮ ದೇವಿ ಕಳಸಾರೋಹಣ

ಹೊನ್ನಾಳಿ, ನ.21- ದೇವಸ್ಥಾನಗಳು, ದೇವಮಂದಿರದ ಕಟ್ಟೆಗಳಿಗೆ ಪ್ರತಿನಿತ್ಯ ಪೂಜೆ ಹಾಗೂ ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರಿಗೆ ಶಾಸಕ ಡಿ.ಜಿ.ಶಾಂತನಗೌಡ ಕಿವಿಮಾತು ಹೇಳಿದರು.

ತಾಲ್ಲೂಕಿನ ಕೊನಾಯಕನಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ದುರ್ಗಮ್ಮ ದೇವಿ ಉದ್ಘಾಟಿಸಿ, ಕಳಸಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಧಾರ್ಮಿಕ ನಂಬಿಕೆಗಳು, ಪ್ರಾಮಾಣಿಕತೆ, ಶ್ರದ್ಧೆಯ ಭಾವನೆಗಳು ಗ್ರಾಮೀಣ ಭಾಗದಲ್ಲಿ ಹೆಚ್ಚು ಬೇರೂರಿದೆ. ಆಧುನಿಕತೆಯಲ್ಲೂ ಹಳ್ಳಿಗಳಲ್ಲಿ ಹಬ್ಬ-ಹರಿದಿನಗಳು ಜೀವಂತವಾಗಿವೆ ಎಂದರು.

ಗ್ರಾಮದ ಮುಖಂಡರಾದ ಎಂ.ಎಲ್.ಬಸವಲಿಂಗಪ್ಪ, ಸುರೇಶ್, ನಿಂಗಪ್ಪ, ಕೆಂಪರಾಜ್, ಕೆ.ಬಿ.ಮಂಜುನಾಥ್, ಶಿವಪ್ಪ, ರಾಘವೇಂದ್ರ, ವಿಜಯ್‍ಕುಮಾರ, ಮಂಜಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.

error: Content is protected !!