ಶಿವನಕೆರೆ ಬಸವಲಿಂಗಪ್ಪನವರ `ನಿತ್ಯಾನಂದಕ್ಕೆ ನೀತಿ-ಪ್ರೀತಿ’ ಪುಸ್ತಕ ಬಿಡುಗಡೆ

ಶಿವನಕೆರೆ ಬಸವಲಿಂಗಪ್ಪನವರ `ನಿತ್ಯಾನಂದಕ್ಕೆ ನೀತಿ-ಪ್ರೀತಿ’ ಪುಸ್ತಕ ಬಿಡುಗಡೆ

ದಾವಣಗೆರೆ, ನ.20- ಶ್ರೀ  ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸನ್ನಿಧಿಯಲ್ಲಿ ಸಾಣೇಹಳ್ಳಿಯಲ್ಲಿ ಈಚೆಗೆ ನಡೆದ ನಾಟಕೋತ್ಸವದಲ್ಲಿ ನಗರದ ಸಾಮಾಜಿಕ ಚಿಂತಕ ಶಿವನಕೆರೆ ಬಸವಲಿಂಗಪ್ಪ ಅವರ `ನಿತ್ಯಾನಂದಕ್ಕೆ ನೀತಿ-ಪ್ರೀತಿ’ ಪುಸ್ತಕ ಬಿಡುಗಡೆಯಾಯಿತು. 

ಈ ಪುಸ್ತಕದಲ್ಲಿ ಜೀವನಾನಂದದ ಜೀವಜಲ ನೀತಿ-ಪ್ರೀತಿ, ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು, ಸುಖ-ದುಃಖಗಳಿಗೆ ಮನ ಏಕೈಕ ಕಾರಣ, ಕಣ್ಣಿಗೆ ಕಾಣದಿದ್ದರೂ ಕರುಳು ಅರಿಯದೇ?, ಪರಸ್ಪರ ಸಂಬಂಧಗಳಲ್ಲಿ ಜೀವನ, ಮನ-ಮಾತು-ಕಾರ್ಯ ಒಂದಾಗಿರಲಿ, ಆಚಾರ; ಪ್ರಥಮ ಧರ್ಮ-ಪರಮ ಧರ್ಮ, ಹಿಡಿಯಬೇಕಾದವನ್ನು ಹಿಡಿ, ಬಿಡಬೇಕಾದವನ್ನು ಬಿಡು, ನಮಗೆ ನಾವು ಪ್ರಾಮಾಣಿಕರಾಗಿರಬೇಕು, ಬಿದ್ದವರಿಂದ, ಇದ್ದವರಿಂದ, ಬಿದ್ದು ಎದ್ದವರಿಂದ ಕಲಿಯಬೇಕು ಮುಂತಾದ ಹತ್ತು ಹಲವು ಶಿರೋನಾಮೆ ಹೊಂದಿರುವ ಲೇಖನಗಳಿವೆ.

ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ, ವಚನಕಾರರ ಹಾಗೂ ಜಗತ್ತಿನ ಇತರೆ ದಾರ್ಶನಿಕರ ಜೀವನಾನುಭವದ ಮಾತುಗ ಳನ್ನು ಈ ಪುಸ್ತಕ ಒಳಗೊಂಡಿದೆ. ನಮ್ಮ ಜನರು ಇಂತಹ ಪುಸ್ತಕಗಳನ್ನು ಮೊದಲು ಓದಿ, ನಂತರ ಅನುಸರಿಸಿದರೆ ಅಂತವರ ಜೀವನ ಪಾವನವಾಗುತ್ತದೆ ಎಂದು ಸಾಣೇ ಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವದಿಸಿದರು.

error: Content is protected !!