ಕನ್ನಡಿಗರು ಒಗ್ಗಟ್ಟಾಗಿದ್ದರೆ ಮಾತ್ರ ಭಾಷೆ ಉಳಿವು ಸಾಧ್ಯ

ಕನ್ನಡಿಗರು ಒಗ್ಗಟ್ಟಾಗಿದ್ದರೆ ಮಾತ್ರ ಭಾಷೆ ಉಳಿವು ಸಾಧ್ಯ

ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ 

ಚನ್ನಗಿರಿ, ನ. 20-  ಕನ್ನಡಿಗರು ಒಗ್ಗಟ್ಟಾಗಿದ್ದರೆ ಮಾತ್ರ ಭಾಷೆ ಉಳಿಯಲು ಸಾಧ್ಯ ಎಂದು ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ತಿಳಿಸಿದರು.

ಚನ್ನಗಿರಿ ತಾಲ್ಲೂಕು ನವಿಲೇಹಾಳು ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಶಾಖೆ ವತಿಯಿಂದ ನಿನ್ನೆ ಹಮ್ಮಿಕೊಂಡಿದ್ದ 68 ನೇ ಕರ್ನಾಟಕ ರಾಜ್ಯೋತ್ಸವ ಹಾಗೂ  ಪುನೀತ್ ರಾಜಕುಮಾರ್ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ  ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಕನ್ನಡಿಗರು ಒಗ್ಗಟ್ಟಾಗಿದ್ದರೆ ಏನು ಬೇಕಾದರೂ ಸಾಧಿಸಬಹುದು, ಒಂದು ಭಾಷೆ ಉಳಿಯಲು ಕನ್ನಡತನವನ್ನು ಪ್ರೀತಿಸುವ, ಬೆಳೆಸುವ, ಭಾಷೆ ಕಟ್ಟುವ ಕೆಲಸ ಮಾಡಬೇಕಾಗಿದೆ. ಕರವೇ ಅಂತಹ ಹೋರಾಟದ ಸಂಘಟನೆ ಗಳಿಂದ ಕರ್ನಾಟಕ ಸದೃಢವಾಗಲು ಕಾರಣವಾಗಿದೆ ಎಂದರು.

ಪರ ಭಾಷೆಯವರು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಾ ಬರುವುದನ್ನು ಕರವೇ  ಹೋರಾಟದಿಂದ ತಪ್ಪಿಸದಂತಾಗಿದೆ. 2400 ವರ್ಷಗಳ ಇತಿಹಾಸ ವುಳ್ಳಂತಹ ನಮ್ಮ ಭಾಷೆ  ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಂತಹ ಪುಣ್ಯಭೂಮಿ, ಇಂಥ ನಾಡಿನಲ್ಲಿ ಕೆಲವು ಕನ್ನಡಿಗರಿಂದಲೇ ಕೆಡುಕು ಉಂಟಾಗುತ್ತಿದ್ದು, ಅಂಥವರಿಗೆ ಕರವೇ ತಕ್ಕ ಶಾಸ್ತಿ ಮಾಡಿದೆ ಎಂದು ಹೇಳಿದರು. 

ಈಗಿನ ಮಕ್ಕಳು ಮಮ್ಮಿ, ಡ್ಯಾಡಿ ಸಂಸ್ಕೃತಿ ಕೈ ಬಿಟ್ಟು ಅಪ್ಪ-ಅಮ್ಮ ಸಂಸ್ಕಾರ  ಬೆಳೆಸಬೇಕಾಗಿದೆ.   ಹೊರ ರಾಜ್ಯದವರು ಇಲ್ಲಿ ನೆಲೆಸಬೇಕಾದರೆ  ಅವರು ಕನ್ನಡ ಭಾಷೆ ಕಲಿಯಬೇಕಾಗುವುದು ಅನಿವಾರ್ಯ ಎಂದರು.

ಕರವೇ ಅಂತವರಿಗೆ ಕನ್ನಡ ಕಲಿಕೆಗೆ ಸಹಕಾರ ನೀಡುತ್ತದೆ.  ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕನ್ನಡದ ವಾತಾವರಣ ಕಾಣಲು ಸಾಧ್ಯ. ನಗರ ಪ್ರದೇಶದಲ್ಲಿ ಇಂಗ್ಲಿಷ್ ವ್ಯಾಮೋಹಕ್ಕೆ ಸಿಕ್ಕಿ ಕನ್ನಡವನ್ನು ಕಡೆಗಣಿಸುತ್ತಿದ್ದು, ಅಂತಹವರಿಗೂ ಸಹ ಕರವೇ ತಕ್ಕ ಪಾಠ ಕಲಿಸ ಲಿದೆ ಎಂದು ತಿಳಿಸಿದರು.

ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ ಮಾತನಾಡಿ,  ಕನ್ನಡ ಭಾಷೆ  ಈ ನೆಲದ ಸಂಸ್ಕೃತಿ  ಯಲ್ಲಿ ವೈಶಿಷ್ಟ್ಯತೆ ಪಡೆದ ಗ್ರಾಮ ನವಿಲೇಹಾಳು.  ಒಂದು ಭಾಗ ದಿಂದ ಇನ್ನೊಂದು ಭಾಗ ಭಾಷೆ ಮಾತನಾಡುವುದು ಕನ್ನಡವಾ ದರೂ ವಿಭಿನ್ನ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ ಎಂದರು. 

ಕೆ. ಮಹೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಪ್ಪ ನಿರೂಪಿಸಿದರು. ಈ ಸಂದರ್ಭದಲ್ಲಿ ಕರವೇ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಬಸಮ್ಮ, ಎಂಡಿ ರಫೀಕ್. ಬಿ.ಜಿ. ವೀರೇಶ್. ಜಾಕಿರ್ ಹುಸೇನ್ .ಶ್ರೀನಾಥ್. ಪಿಡಿಓ ಎನ್.ಬಾಬು, ಚಂದ್ರಪ್ಪ .ಗ್ರಾಮ ಪಂಚಾಯಿತಿ ಅಧ್ಯಕ್ಷ,  ಕರವೇ ಗ್ರಾಮ ಶಾಖೆ ಅಧ್ಯಕ್ಷ ಹಫೀಜ್‌. ಚಂದ್ರಪ್ಪ ಬಿ.ಕೆ. ಕೃಷ್ಣಪ್ಪ, ಗುಂಡಪ್ಪ, ವೆಂಕಟೇಶ್, ಮಲ್ಲೇಶ , ಜಗದೀಶ್, ಶೇಖ್ ಹುಸೇನ್, ಹನುಮಂತಪ್ಪ, ದೇವರಾಜ್, ಅನ್ವರ್, ವಿಜಯಲಕ್ಷ್ಮಿ, ರೇಣುಕಾ, ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು

error: Content is protected !!