ದೇಹಕ್ಕೆ ಬೇಕಾದ ಸೂಕ್ಷ್ಮ ಪೋಷಕಾಂಶ ಆಯೋಡಿನ್

ದೇಹಕ್ಕೆ ಬೇಕಾದ ಸೂಕ್ಷ್ಮ ಪೋಷಕಾಂಶ ಆಯೋಡಿನ್

ದಾವಣಗೆರೆ, ನ. 20 – ಅಯೋಡಿನ್ ನಮ್ಮ ದೇಹಕ್ಕೆ ಬೇಕಾದ ಸೂಕ್ಷ್ಮ ಪೋಷಕಾಂಶ. ನಮ್ಮ ದಿನ ನಿತ್ಯದ ಆಹಾರದಲ್ಲಿ ತೆಗೆದುಕೊಳ್ಳಬೇಕು, ಥೈರಾಯ್ಡ್ ಗ್ರಂಥಿಯು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಾದರೆ ಇದರ ಅವಶ್ಯಕತೆ ಅತಿ ಮುಖ್ಯವಾಗಿರುತ್ತದೆ ಎಂದು ದಾವಣಗೆರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ದೇವರಾಜ ಪಿ. ಪಟಗೆ ಹೇಳಿದರು.

ನಗರದ ತಾಲ್ಲೂಕು ಆರೋಗ್ಯಾಧಿ ಕಾರಿಗಳ ಕಛೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ವಿಶ್ವ ಅಯೋಡಿನ್ ಕೊರತೆಯ ನ್ಯೂನತೆಗಳ ನಿಯಂತ್ರಣ ದಿನಾಚರಣೆ ಹಾಗೂ ಸಪ್ತಾಹ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಅಯೋಡಿನ್ ಅಂಶವು ಮುಖ್ಯವಾಗಿ ಗರ್ಭದಲ್ಲಿ ಮಗುವಿನ ಸಮರ್ಪಕ ಬೆಳವಣಿಗೆ ಮತ್ತು ಮಾನಸಿಕ, ದೈಹಿಕ ಬೆಳವಣಿಗೆಗೆ ಅತ್ಯಅವಶ್ಯಕ. ಸಮುದ್ರ ಆಹಾರಗಳಾದ ಮೀನು, ಸಿಗಡಿ ಹಾಗೂ ನೆಲದಲ್ಲಿ ಬೆಳೆಯುವ ಮೂಲಂಗಿ ಇನ್ನಿತರೆ ಬೆಳೆಗಳಲ್ಲಿ ಅಯೋಡಿನ್ ಅಂಶ ದೊರೆಯುತ್ತದೆ ಎಂದರು.

ಅಯೋಡಿನ್ ಅಂಶವು ಕಡಿಮೆಯಾದರೆ ಗರ್ಭಿಣಿಯರಲ್ಲಿ ಹುಟ್ಟುವ ಮಗು ದೈಹಿಕ ಮತ್ತು ಮಾನಸಿಕ ವಿಕಲತೆ ಕಂಡು ಬರಬಹುದು. ಮೈ ಇಳಿತ, ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತ, ಕಿವುಡುತನ, ಮೂಕತನ ಕಂಡು ಬರುತ್ತವೆ. ಅದರಲ್ಲೂ ಬೆಟ್ಟಗುಡ್ಡ, ಇಳಿಜಾರು ಪ್ರದೇಶ, ಅರಣ್ಯ, ನೆರೆ ಹಾವಳಿಗಳ ಪ್ರದೇಶದಲ್ಲಿ ಅಯೋಡಿನ್ ಅಂಶವು ಕಡಿಮೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋ ಗ್ಯಾಧಿಕಾರಿಗಳಾದ ಹೆಚ್.ಉಮಾಪತಿ, ಆರ್.ಲೋಕೇಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ.ಎಸ್.ವೆಂಕಟಾಚಲ ಕುಮಾರ, ಪಿ.ವಿ.ರವಿ ಇತರರು ಇದ್ದರು.

error: Content is protected !!