ದಾವಣಗೆರೆ, ನ. 19- ವಿನೋಬನಗರ 15ನೇ ವಾರ್ಡಿನ ನಾಲ್ಕನೇ ಮುಖ್ಯರಸ್ತೆ ಎರಡನೇ ಅಡ್ಡರಸ್ತೆಯಲ್ಲಿ 15ನೇ ಹಣಕಾಸು ಅಡಿಯಲ್ಲಿ 85 ಲಕ್ಷ ರೂ.ಗಳ ಒಳಚರಂಡಿ ಮತ್ತು ಕವರಿಂಗ್ ಸ್ಲಾಬ್ ಅಳವಡಿಸುವ ಸಲುವಾಗಿ ಏರ್ಪಡಿಸಿದ್ದ ಭೂಮಿ ಪೂಜೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೆರವೇರಿಸಿದರು.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವರು, ಮಹಾನಗರ ಪಾಲಿಕೆ ಸದಸ್ಯರು ಉತ್ತಮ ಕೆಲಸ, ಕಾರ್ಯಗಳನ್ನು ನೆರವೇರಿಸಲಿ ಎಂದು ತಿಳಿಸುತ್ತಾ, ಕಾರ್ಪೆಂಟರ್ಗಳ ಜೊತೆ ನಾವಿರುತ್ತೇವೆ ಎಂದು ಕಿವಿಮಾತು ಹೇಳಿದರು
ಸಚಿವರೊಂದಿಗೆ ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀಮತಿ ಆಶಾ ಉಮೇಶ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಾದ ಉಮೇಶ್, ಹೊನ್ನರಾಜು, ದಿನೇಶ್, 15ನೇ ವಾರ್ಡಿನ ಅಧ್ಯಕ್ಷ ವಿನಾಯಕ, ರವಿ,ರಘು, ಜಾಧವ್, ಸಮಾಜ ಸೇವಕ ಕೆ.ಎಂ. ವೀರಯ್ಯ ಮತ್ತು ಇತರರು ಉಪಸ್ಥಿತರಿದ್ದರು.