ಯಲವಟ್ಟಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಶಿವಪ್ಪ

ಯಲವಟ್ಟಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಶಿವಪ್ಪ

ಮಲೇಬೆನ್ನೂರು, ನ.19- ಯಲವಟ್ಟಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ಹೆಚ್‌. ಶಿವಪ್ಪ ಅವರು ಭಾನುವಾರ ನಡೆದ ಚುನಾವ ಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಯ ಶ್ರೀಮತಿ ಶೃತಿ ಅವರು ಚುನಾವಣಾಧಿಕಾರಿಯಾಗಿದ್ದರು.

ಸಂಘದ ಉಪಾಧ್ಯಕ್ಷ ಕೆ. ಕರೀಶ್‌, ನಿರ್ದೇಶಕರಾದ ಡಿ.ಹೆಚ್‌. ಶಿವಾನಂದಪ್ಪ, ಡಿ.ಜಿ. ನಾಗರಾಜಪ್ಪ, ಎಸ್‌.ಪಿ. ರಾಮನಾಯ್ಕ, ಬಿ. ಬಸವರಾಜಪ್ಪ, ಹೆಚ್‌.ಸಿ. ಬಸವರಾಜಪ್ಪ, ಕೆ. ತಿರುಕಪ್ಪ, ಹೆಚ್‌.ಟಿ. ರುದ್ರಪ್ಪ, ಹೆಚ್‌.ಎಂ. ಪೂರ್ಣಿಮಾ, ಬಿ.ಜಿ. ಸುಶೀಲಮ್ಮ, ಕೆ. ರೇಣುಕಮ್ಮ, ಕಮಲಮ್ಮ, ಸಂಘದ ಕಾರ್ಯದರ್ಶಿ ಜಿ.ಎನ್‌. ಉಮೇಶ್ ಈ ವೇಳೆ ಹಾಜರಿದ್ದು ಅವಿರೋಧ ಆಯ್ಕೆ ಮಾಡಿದರು.

error: Content is protected !!