ಕೊಟ್ಟೂರಿನಲ್ಲಿ ಅದ್ಧೂರಿ ಕನ್ನಡ ರಥೋತ್ಸವ

ಕೊಟ್ಟೂರಿನಲ್ಲಿ ಅದ್ಧೂರಿ ಕನ್ನಡ ರಥೋತ್ಸವ

ಕೊಟ್ಟೂರು, ನ. 12 – ಮೈಸೂರು ರಾಜ್ಯವು ಕರ್ನಾಟಕ ಎಂದು ನಾಮಕರಣವಾಗಿ  ನವೆಂಬರ್ 1,  2023 ಕ್ಕೆ 50 ವರ್ಷ ಪೂರ್ಣಗೊಳಿಸಿರುವ ಈ ಶುಭ ಸಂದರ್ಭದಲ್ಲಿ ಕರ್ನಾಟಕ ಸಂಭ್ರಮ 50 ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕ ಇತಿಹಾಸ ತಿಳಿಸುವ ಉದ್ಧೇಶದಿಂದ ಕನ್ನಡ ಸಂಸ್ಕೃತಿ ಇಲಾಖೆಯು ಕನ್ನಡ ರಥ ಯಾತ್ರೆಯನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. 

ತಾಲ್ಲೂಕು ಗಡಿಯಾದ ಮತ್ತಳ್ಳಿ ಕ್ರಾಸ್ ಬಳಿ ಕನ್ನಡ ರಥಕ್ಕೆ ಭವ್ಯ ಸ್ವಾಗತ ನೀಡಿ, ಕೊಟ್ಟೂರು ತಾಲ್ಲೂಕು ತಹಶೀಲ್ದಾರ್ ಜಿ.ಕೆ. ಅಮರೇಶ್ ಸ್ವಾಗತಿಸಿದರು.

ಕನ್ನಡ ಮಾತೆ ಭುವನೇಶ್ವರಿ ಭಾವಚಿತ್ರ ವಿರುವ ಆಕರ್ಷಕ ಕನ್ನಡ ರಥೋತ್ಸವದ ಮೆರವಣಿಗೆಯು  ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಜರುಗಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಂದಿದ್ದ ನೃತ್ಯಗಾರರು ಕನ್ನಡ ಹಾಡಿಗೆ ಮನಮೋಹಕವಾಗಿ ನೃತ್ಯ ಮಾಡಿದರು. ಅವರ ಜೊತೆಗೆ ಕನ್ನಡ ಅಭಿಮಾನಿಗಳು, ಕನ್ನಡ ಪರ ಸಂಘಟನೆಗಳು, ಸಂಘ-ಸಂಸ್ಥೆಗಳ ಮುಖಂ ಡರು ಕನ್ನಡ ಹಾಡಿಗೆ ಕುಣಿದು ಕುಪ್ಪಳಿಸಿದರು. 

ರಥದ ಮುಂದೆ ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡಿನ ಜಯಘೋಷಗಳನ್ನು ಕೂಗುತ್ತಾ ಕನ್ನಡ ಹಾಡುಗಳನ್ನು ಹಾಡುತ್ತಾ ಮೆರವಣಿಗೆಯಲ್ಲಿ ಕುಣಿದಾಡಿದರು. ಕಲಾವಿದರು ಕಲಾ ಪ್ರತಿಭೆಗಳನ್ನು ಪ್ರದರ್ಶಿಸಿ ನೋಡುಗರನ್ನು ಮನಸೂರೆಗೊಳಿಸಿ ದರು. ಸಾಂಸ್ಕೃತಿಕ ಕಲಾ ತಂಡಗಳಾದ ನಂದಿ ಕೋಲು ಕುಣಿತ ಮೆರವಣಿಗೆ ಮೆರಗನ್ನು ಹೆಚ್ಚಿಸಿತು.

ತಹಶೀಲ್ದಾರ್ ಜಿ.ಕೆ. ಅಮರೇಶ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸರುಲ್ಲಾ, ತಾ.ಪಂ. ಸಹಾಯಕ ನಿರ್ದೇಶಕ ವಿಜಯಕುಮಾರ್, ಕಸಾಪ ತಾಲ್ಲೂಕು ಅಧ್ಯಕ್ಷ ದೇವರ ಮನಿ ಕೊಟ್ರೇಶ್, ಕರವೇ ನಾರಾಯಣ ಗೌಡ ಬಣದ ತಾಲ್ಲೂಕು ಅಧ್ಯಕ್ಷ ಎಂ. ಶ್ರೀನಿವಾಸ್, ಪಟ್ಟಣ ಪಂಚಾಯಿತಿ ಸದಸ್ಯ ವೀಣಾ ವಿವೇಕಾನಂದ ಗೌಡ, ಕೆಂಗರಾಜ, ಷಫಿ, ಶಿಕ್ಷಣ ಇಲಾಖೆಯ ಅಜ್ಜಪ್ಪ, ಸಿದ್ದಪ್ಪ, ಶಶಿಧರ ಮೈದೂರು, ಮುಖಂಡರುಗಳಾದ ತೆಗ್ಗಿನಕೇರಿ ಹನುಮಂತಪ್ಪ, ಕೊಟ್ರೇಶ್, ಎನ್.ಗೋಪಿ, ಬದ್ದಿ ದುರುಗೇಶ್, ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!