ದಾವಣಗೆರೆ, ನ. 2- ದಾವಣಗೆರೆ ವಿಶ್ವವಿದ್ಯಾಲಯದ ಕಬಡ್ಡಿ ಅಂತರ ಕಾಲೇಜು ಕ್ರೀಡಾಕೂಟ ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನಲ್ಲಿ ಈಚೆಗೆ ನಡೆಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆ ಪುರುಷ ತಂಡ ಭಾಗವಹಿಸಿ ತೃತೀಯ ಸ್ಥಾನ ಪಡೆದಿರುತ್ತದೆ. ವಿಜೇತ ತಂಡಕ್ಕೆ ಪ್ರಾಂಶುಪಾಲ ಡಾ. ದಾದಾಪೀರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಎಂ.ಆರ್. ರೇಖಾ, ಪತ್ರಾಂಕಿತ ವ್ಯವಸ್ಥಾಪಕರಾದ ಗೀತಾದೇವಿ ಹಾಗೂ ಕಾಲೇಜಿನ ಕ್ರೀಡಾ ವಿಭಾಗದ ಸದಸ್ಯ ವೆಂಕಟೇಶ್ ಬಾಬು, ಜೆ.ಎಂ. ಮಂಜುನಾಥ ಅಭಿನಂದನೆ ಸಲ್ಲಿಸಿದ್ದಾರೆ.
ಸ.ಕಾಲೇಜು ಕಬಡ್ಡಿ ತಂಡ ತೃತೀಯ
