ಸಾಣೇಹಳ್ಳಿಯಲ್ಲಿ ಇಂದಿನಿಂದ `ಶಿವ ಸಂಚಾರ’ ರಾಷ್ಟ್ರೀಯ ನಾಟಕೋತ್ಸವದ ಸಂಭ್ರಮ

ಸಾಣೇಹಳ್ಳಿಯಲ್ಲಿ ಇಂದಿನಿಂದ `ಶಿವ ಸಂಚಾರ’ ರಾಷ್ಟ್ರೀಯ ನಾಟಕೋತ್ಸವದ ಸಂಭ್ರಮ

ಸಾಣೇಹಳ್ಳಿಯಲ್ಲಿ ಇಂದಿನಿಂದ `ಶಿವ ಸಂಚಾರ' ರಾಷ್ಟ್ರೀಯ ನಾಟಕೋತ್ಸವದ ಸಂಭ್ರಮ - Janathavaniಸಾಣೇಹಳ್ಳಿಯಲ್ಲಿ ಇಂದಿನಿಂದ ಇದೇ ದಿನಾಂಕ 8 ರವರೆಗೆ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ. ಶ್ರೀ ಶಿವಕುಮಾರ ಕಲಾ ಸಂಘವು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ `ಅರಿವೆ, ಗಗನದಿಂದ ಮೇಲೆ ಅನುಭಾವ ತಾನಿಲ್ಲ’ ಎನ್ನುವ ಧ್ಯೇಯ ವಾಕ್ಯದೊಂದಿಗೆ  ಈ ನಾಟಕೋತ್ಸವ ಹಮ್ಮಿಕೊಂಡಿದೆ.

 ಪ್ರತಿದಿನವೂ ಸಾಮೂಹಿಕ ಪ್ರಾರ್ಥನೆ, ಶಿವಮಂತ್ರ ಲೇಖನ, ಚಿಂತನ, ವಚನಗೀತೆ, ನೃತ್ಯರೂಪಕ, ಕೃತಿಗಳ ಲೋಕಾರ್ಪಣೆ, ಅಭಿನಂದನೆ, ಉಪನ್ಯಾಸ, ಆಶೀರ್ವಚನ, ನಾಟಕ ಪ್ರದರ್ಶನ ಮತ್ತು ದಾಸೋಹದ ವ್ಯವಸ್ಥೆ  ಮಾಡಲಾಗಿದೆ.  

ಇಂದು ಸಂಜೆ 6 ಗಂಟೆಗೆ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸುವರು.

ಶಿವಸಂಚಾರ ನಾಟಕಗಳ ಉದ್ಘಾಟನೆಯನ್ನು ಹಿರಿಯ ಶಾಸಕ  ಶಾಮನೂರು ಶಿವಶಂಕರಪ್ಪ ನೆರವೇರಿಸುವರು. ಕನ್ನಡ ರಾಜ್ಯೋತ್ಸವದ ಉದ್ಘಾಟನೆಯನ್ನು  ಕವಿ ಜಯಂತ್ ಕಾಯ್ಕಿಣಿ ಮಾಡಲಿದ್ದಾರೆ.  ಅತಿಥಿಗಳಾಗಿ ಸಂಸದ ಜಿ ಎಂ ಸಿದ್ಧೇಶ್ವರ,  ಮಾಜಿ ಸಚಿವ  ಬಿ. ಸಿ. ಪಾಟೀಲ,  ಜಗಳೂರು ಶಾಸಕ ಬಿ. ದೇವೇಂದ್ರಪ್ಪ, ಶಿವಮೊಗ್ಗ ಮಾಜಿ ಶಾಸಕ   ಚಂದ್ರಶೇಖರಪ್ಪ, ಕಡೂರು ಮಾಜಿ ಶಾಸಕ  ಬೆಳ್ಳಿ ಪ್ರಕಾಶ್,    ಅ. ಭಾ. ವೀ. ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ  ಅಣಬೇರು ರಾಜಣ್ಣ,   ಚಲನಚಿತ್ರ ನಟ  ಡಾಲಿ ಧನಂಜಯ್ ಅವರುಗಳು ಆಗಮಿಸಲಿದ್ದಾರೆ.

ನಾಳೆ ಶುಕ್ರವಾರ ಸಂಜೆ 6 ಗಂಟೆಗೆ  ಸುತ್ತೂರು ಜಗದ್ಗುರು ವೀರ ಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಉಪನ್ಯಾಸ.  ಉಪನ್ಯಾಸಕರು: ಶ್ರೀಮತಿ ಕೆ ಎಸ್ ವಿಮಲ. ವಿಷಯ: `ಒಳಗೆ ಸುಳಿವಾತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲ’.

ಅತಿಥಿಗಳು:  ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವ ಎ. ನಾರಾಯಣ ಸ್ವಾಮಿ,   ಹರಿಹರ ಶಾಸಕ ಬಿ. ಪಿ. ಹರೀಶ್, ಚಿಕ್ಕಮಗಳೂರು  ಶಾಸಕ   ಹೆಚ್. ಡಿ. ತಮ್ಮಯ್ಯ,  ತರೀಕೆರೆ ಮಾಜಿ ಶಾಸಕ    ಡಿ. ಎಸ್. ಸುರೇಶ್, ಚನ್ನಗಿರಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ದಾವಣಗೆರೆ ಜಿಪಂ   ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ್,  ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.  ಕೆ. ಬಿ. ಗುಡಸಿ,  ಚಲನಚಿತ್ರ ಸಂಗೀತ ನಿರ್ದೇಶಕ     ವಿ. ಮನೋಹರ್,   ರಾಷ್ಟ್ರಕವಿ ಎಂ. ಗೋವಿಂದ ಪೈ ಸ್ಮಾರಕ ಸಮಿತಿ, ಕೇರಳ ಕಾರ್ಯದರ್ಶಿ  ಉಮೇಶ್ ಎಂ. ಸಾಲಿಯಾನ.

ಅಭಿನಂದನೆ: ಎನ್. ಎಂ. ಬಸವರಾಜಪ್ಪ, ಸ್ವಾತಂತ್ರ್ಯ ಹೋರಾಟಗಾರರು, ನೇರ್ಲಿಗೆ, ನೃತ್ಯರೂಪಕ: ಎಸ್ ನಿಜಲಿಂಗಪ್ಪ ವಿದ್ಯಾಸಂಸ್ಥೆ, ಹೊಸದುರ್ಗ. 

ನಾಟಕ: ದ ವಿಲನ್‍ಮಾರ್ (ಮಲೆಯಾಳಿ) ರಚನೆ: ಎಂ ಪಿ ರಾಜೇಶ್, ನಿರ್ದೇಶನ: ಅರುಣ್‍ಲಾಲ್,  ಅಭಿನಯ: ಲಿಟಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್, ಕೇರಳ.

ದಿನಾಂಕ 4ರ ಶನಿವಾರ ಬೆಳಗ್ಗೆ 10 ಗಂಟೆಗೆ ಎಸ್. ಎಸ್. ಒಳಾಂಗಣ ರಂಗಮಂದಿರದಲ್ಲಿ ವಿಚಾರ ಸಂಕಿರಣ: `ಕಾಯಕ ಮತ್ತು ದಾಸೋಹ ತತ್ವಗಳ ಅಂತರ್ ಸಂಬಂಧ’  ಅಧ್ಯಕ್ಷತೆ: ಹಿರಿಯ ಚಿಂತಕ ಪ್ರೊ. ಎಸ್.ಜಿ. ಸಿದ್ಧರಾಮಯ್ಯ. ಕಾಯಕ ತತ್ವ: ಪ್ರೊ. ರಾಜೇಂದ್ರ ಚೆನ್ನಿ, ಚಿಂತಕರು, ಶಿವಮೊಗ್ಗ, ದಾಸೋಹ ತತ್ವ: ಡಾ. ಎಂ. ಎಸ್. ಆಶಾದೇವಿ, ಪ್ರಾಧ್ಯಾಪಕರು.

 

ಅತಿಥಿಗಳು:   ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,  ಉಪನಿರ್ದೇಶಕ  ಕೆ ರವಿಶಂಕರ ರೆಡ್ಡಿ.  ಉಪಸ್ಥಿತಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿಕ್ಷಣಾಧಿಕಾರಿ ಸಿ. ಎಂ. ತಿಪ್ಪೇಸ್ವಾಮಿ ಹಿರಿಯೂರು,  ಸೈಯಾದ್ ಮೋಸಿನ್  ಹೊಸದುರ್ಗ,   ಶ್ರೀನಿವಾಸ್  ಹೊಳಲ್ಕೆರೆ,     ನಾಗಭೂಷಣ್  ಚಿತ್ರದುರ್ಗ,  ಸುರೇಶ್    ಚಳ್ಳಕೆರೆ, ಶ್ರೀಮತಿ ವಿಮಲಾದೇವಿ ಮೊಳಕಾಲ್ಮೂರು.

ಸಂಜೆ 6 ಗಂಟೆಗೆ   ಕನಕ ಗುರುಪೀಠ, ಶ್ರೀಕ್ಷೇತ್ರ ಕಾಗಿನೆಲೆ     ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಉಪನ್ಯಾಸ. ವಿಷಯ: `ಜಲ ವಿವಾದ’ ಉಪನ್ಯಾಸಕರು: ನಿವೃತ್ತ ಐಪಿಎಸ್ ಅಧಿಕಾರಿ ಡಾ. ಸಿ ಚಂದ್ರಶೇಖರ್.

ಅತಿಥಿಗಳು: ಕೇಂದ್ರ  ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಇಲಾಖೆ ಸಚಿವ  ಪ್ರಹ್ಲಾದ್ ಜೋಷಿ,   ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ  ಹೆಚ್. ಕೆ. ಪಾಟೀಲ,    ಹೊಳಲ್ಕೆರೆ ಶಾಸಕ  ಎಂ ಚಂದ್ರಪ್ಪ,   ವಿಧಾನ ಪರಿಷತ್ ಸದಸ್ಯ  ಕೆ. ಎಸ್ ನವೀನ್,  ಚನ್ನಗಿರಿ  ಶಾಸಕ   ಶಿವಗಂಗಾ ಬಸವರಾಜ್,  ಮಾಜಿ ಸಚಿವ  ಗೂಳಿಹಟ್ಟಿ ಡಿ. ಶೇಖರ್,  ವಿಜಯನಗರ ಜಿಲ್ಲಾಧಿಕಾರಿ ಎಂ. ಎಸ್. ದಿವಾಕರ್, ರಂಗಕರ್ಮಿ ಎಸ್. ಎನ್. ಸೇತುರಾಮ್ ಬೆಂಗಳೂರು. ಚಲನಚಿತ್ರ ನಿರ್ದೇಶಕ  ರಾಜೇಂದ್ರಸಿಂಗ್ ಬಾಬು.

ಅಭಿನಂದನೆ: ಶ್ರೀವರ್ಷಾ, ಅಂಧ ಕ್ರಿಕೆಟ್ ಆಟಗಾರ್ತಿ, ಆದಿವಾಲ, ಹಿರಿಯೂರು.

ದಿನಾಂಕ 5ರ ಭಾನುವಾರ ಸಂಜೆ 6 ಗಂಟೆಗೆ ಮೈಸೂರು ಶ್ರೀ ಶಿವಯೋಗೀಶ್ವರ ಮಠದ  ಶ್ರೀ ಜ್ಞಾನಪ್ರಕಾಶ ಸ್ವಾಮಿಗಳ ಸಾನ್ನಿಧ್ಯದಲ್ಲಿ ಉಪನ್ಯಾಸ. ವಿಷಯ: `ಸಾಹಿತ್ಯ ಮತ್ತು ಸಂಸ್ಕೃತಿ; ಸಮಕಾಲೀನ ಸವಾಲುಗಳು’  ಬೆಂಗಳೂರು ವಿಶ್ವವಿದ್ಯಾಲಯ ಆಂಗ್ಲ ಭಾಷಾ ಪ್ರಾಧ್ಯಾಪಕ   ಡಾ. ನಟರಾಜ ಹುಳಿಯಾರ್. ಅತಿಥಿಗಳು:  ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್, ಚಳ್ಳಕೆರೆ ಶಾಸಕ   ಟಿ ರಘುಮೂರ್ತಿ,   ಹಿರೇಕೆರೂರು ಶಾಸಕ ಯು. ಬಿ. ಬಣಕಾರ,  ಬೆಳಗಾಗಿ  ಪೊಲೀಸ್ ಆಯುಕ್ತ ಎನ್. ಎಸ್. ಸಿದ್ಧರಾಮಪ್ಪ,   ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು  ನಿರ್ದೇಶಕಿ   ಡಾ. ಧರಣಿದೇವಿ ಮಾಲಗತ್ತಿ,  ಚಲನಚಿತ್ರ ನಟ   ಡಾಲಿ ಧನಂಜಯ್,  ಚಿತ್ರದುರ್ಗ ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ  ಧರ್ಮೇಂದ್ರಕುಮಾರ್ ಮೀನಾ.

ಅಭಿನಂದನೆ: ಡಾ. ಬಿ. ಜೆ. ಗಿರೀಶ್, ಪ್ರಾಧ್ಯಾಪಕರು, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ.

ದಿನಾಂಕ 6ರ ಸೋಮವಾರ ಸಂಜೆ 6 ಗಂಟೆಗೆ   ಹುಬ್ಬಳ್ಳಿ ಮೂರುಸಾವಿರ ಮಠದ  ಶ್ರೀ ಜಗದ್ಗುರು ಡಾ. ಗುರು ಸಿದ್ಧರಾಜಯೋಗೀಂದ್ರ ಮಹಾಸ್ವಾಮೀಜಿ  ಸಾನ್ನಿಧ್ಯದಲ್ಲಿ ಉಪನ್ಯಾಸ. ವಿಷಯ: `ಕೃಷಿಕರ ನೋವು-ನಲಿವು-ರಕ್ಷಣೆ’

ಉಪನ್ಯಾಸಕರು:   ಕಾರಿಗನೂರು ರೈತ ಮುಖಂಡ  ತೇಜಸ್ವಿ ಪಟೇಲ್. ಅತಿಥಿಗಳು:  ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ,  ಶಿಕಾರಿಪುರ ಶಾಸಕ    ಬಿ. ವೈ. ವಿಜಯೇಂದ್ರ,  ತರೀಕೆರೆ ಶಾಸಕ ಜಿ. ಹೆಚ್. ಶ್ರೀನಿವಾಸ,   ಹರಪನಹಳ್ಳಿ ಶಾಸಕರಾದ  ಶ್ರೀಮತಿ ಲತಾ ಮಲ್ಲಿಕಾರ್ಜುನ್,   ಚಿತ್ರದುರ್ಗ ಶಾಸಕ ಕೆ. ಸಿ. ವೀರೇಂದ್ರ ಪಪ್ಪಿ,  ಚಿತ್ರದುರ್ಗ ಜಿಲ್ಲಾಧಿಕಾರಿ ಶ್ರೀಮತಿ ಜಿ.ಆರ್.ಜೆ ದಿವ್ಯಾ ಪ್ರಭು,  ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಚಿತ್ರದುರ್ಗ ಕಾರ್ಯನಿರ್ವಣಾಧಿಕಾರಿ ಎಸ್. ಜೆ. ಸೋಮಶೇಖರ್,  ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಸದಸ್ಯರಾದ ಡಾ. ಮುಮ್ತಾಜ್ ಬೇಗಂ.

ಅಭಿನಂದನೆ: ಡಾ. ಬಿ. ಇ. ಕುಮಾರಸ್ವಾಮಿ, ಪ್ರಾಧ್ಯಾಪಕರು, ಕುವೆಂಪು ವಿಶ್ವವಿದ್ಯಾಲಯ.

ದಿನಾಂಕ 7ರ ಮಂಗಳವಾರ ಸಂಜೆ 6 ಗಂಟೆಗೆ   ಹಿರೇಹಡಗಲಿ ಗವಿಮಠದ  ಡಾ. ಹಿರೇಶಾಂತವೀರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಉಪನ್ಯಾಸ. ವಿಷಯ: `ಕಲಾವಿದರ ಸ್ಥಿತಿ-ಗತಿ’

ಉಪನ್ಯಾಸಕರು: ರಾಜ್ಯ ಜಾನಪದ ಅಕಾಡೆಿಮಿ ಮಾಜಿ ಅಧ್ಯಕ್ಷ  ಪಿಚ್ಚಳ್ಳಿ ಶ್ರೀನಿವಾಸ್, ವಿಷಯ: `ಸಂಸ್ಕತಿಯ ಸಂರಕ್ಷಣೆ, ಮಠ-ಪೀಠಗಳ ಹೊಣೆ’ ಉಪನ್ಯಾಸ:   ಚಿಂತಕ ಚಟ್ನಳ್ಳಿ ಮಹೇಶ್, ಅವರಿಂದ.

ಅತಿಥಿಗಳು: ಅರಣ್ಯ, ಜೈವಿಕ ಹಾಗೂ ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ,  ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ  ಪ್ರೊ. ಎಸ್.ಆರ್. ನಿರಂಜನ,   ಚನ್ನಗಿರಿ ಮಾಜಿ  ಶಾಸಕ   ವಡ್ನಾಳ್ ರಾಜಣ್ಣ, ಜಗಳೂರು ಮಾಜಿ ಶಾಸಕ ಎಸ್. ವಿ. ರಾಮಚಂದ್ರಪ್ಪ,  ದಾವಣಗೆರೆ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್,   ಉಪನ್ಯಾಸಕರು, ಚಿಕ್ಕಮಗಳೂರು ಶ್ರೀಮತಿ ನಾಗಶ್ರೀ ತ್ಯಾಗರಾಜ್,    ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಷಣ್ಮುಖಪ್ಪ, ದಾವಣಗೆರೆ.

ಕೃತಿ ಲೋಕಾರ್ಪಣೆ: `ನಿತ್ಯಾನಂದಕ್ಕೆ ನೀತಿ-ಪ್ರೀತಿ’  ಲೇಖ ಕರು:   ಶಿವನಕೆರೆ ಬಸವಲಿಂಗಪ್ಪ. ನೃತ್ಯರೂಪಕ: ಶ್ರೀ ಶಿವಕು ಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆ, ಸಾಣೇಹಳ್ಳಿ,  ನಾಟಕ: `ಆಲ್ ರೈಟ್ ಮಂತ್ರ ಮಾಂಗಲ್ಯ’, ರಚನೆ: ಗಣೇಶ್ ಅಮೀನಗಡ,  ವಿನ್ಯಾಸ ಮತ್ತು ನಿರ್ದೇಶನ: ಮೈಮ್ ರಮೇಶ್,  ಅಭಿನಯ: ಜಿಪಿಐಇಆರ್ ರಂಗ ತಂಡ, ಮೈಸೂರು.

ಕಾರ್ಯಕ್ರಮದ ಕೊನೆಯ ದಿನ 8ರ  ಬುಧವಾರ ಸಂಜೆ 6 ಗಂಟೆಗೆ ಜರುಗುವ ಶ್ರೀ ಶಿವಕುಮಾರ ಪ್ರಶಸ್ತಿ ಪುರಸ್ಕೃತರ  ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ    ಸಿದ್ಧರಾಮಯ್ಯ ಆಗಮಿಸಲಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಸಚಿವ ಎಂ. ಬಿ. ಪಾಟೀಲ್,  ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಇಲಾಖೆ ಸಚಿವ  ಎಸ್. ಎಸ್. ಮಲ್ಲಿಕಾರ್ಜುನ್,    ವಿಧಾನ ಪರಿಷತ್ ಸದಸ್ಯ ಶಿವಮೊಗ್ಗ    ಎಸ್. ರುದ್ರೇಗೌಡ್ರು,  ಹೊಸದುರ್ಗ ಶಾಸಕ  ಬಿ. ಜಿ. ಗೋವಿಂದಪ್ಪ, , ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ರಂಗ ಸಂಘಟಕ   ಶ್ರೀನಿವಾಸ ಜಿ ಕಪ್ಪಣ್ಣ ಆಗಮಿಸುವರು.

ಅಭಿನಂದನೆ: ಶ್ರೀಮತಿ ಕಿರುವಾಡಿ ಗಿರಿಜಮ್ಮ  ದಾವಣಗೆರೆ.

error: Content is protected !!