ಮುಸ್ಲಿಂ ಸಮಾಜದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ

ಮುಸ್ಲಿಂ ಸಮಾಜದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ

ಹರಿಹರ, ಅ.29- ನಗರದ ಮುಸ್ಲಿಂ ಸಮಾಜದ ಪ್ರತಿಷ್ಠಿತ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿಯ 21 ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆದಿದ್ದು ಯಾವುದೇ ಗುಂಪಿಗೆ ಬಹುಮತ ಲಭಿಸದೇ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಆಯ್ಕೆಯಾದವರು ಹಾಗೂ ಅವರು ಪಡೆದ ಮತಗಳ ವಿವರ: ಜಾವೀದ್ ಆರ್.ಸಿ. (1505), ಸೈಯದ್ ಏಜಾಜ್ (1461), ಫಯಾಜ್ ಅಹ್ಮದ್ (ಅರಿಹಂತ್) (1279), ಫಖ್ರುಲ್ಲಾ ಖಾನ್ ಎಚ್. (ಎಚ್‍ಜಿಕೆ) (1114), ಸೈಯದ್ ಅಶ್ಫಾಖ್ (1085), ನಾಸಿರ್ ಸಾಬ್ (ಪೈಲ್ವಾನ್) (1072), ಮೊಹ್ಮದ್ ಸಿಬ್ಗತ್‍ಉಲ್ಲಾ ಬಿ. (1038), ಸೈಯದ್ ಸನಾಉಲ್ಲಾ ಎಂ.ಆರ್. (1021), ಮುಜಮ್ಮಿಲ್ ಎಂ.ಆರ್. (ಬಿಲ್ಲು) (986).

ರೋಷನ್ ಜಮೀರ್ ಟಿ. (ತಹಶೀಲ್ದಾರ್) (981), ನೂರ್ ಉಲ್ಲಾ ಎಚ್. (963), ಸೈಯದ್ ರಹಮಾನ್ (ಕೇಟ್ಲಿ) (942), ಸೈಯದ್ ಬಶೀರ್ ಬಿ. (ದೋಸ್ತಾನಾ) (929), ಸಾದಿಖ್ ಉಲ್ಲಾ ಎಸ್.ಎಂ. (923), ಮೊಹ್ಮದ್ ಅಲಿ ಯೆನೆಪೋಯ (900), ಅಫ್ರೋಜ್ ಖಾನ್ (ಯೂತ್) (893), ಹಾಜಿ ಅಲಿ ಖಾನ್ (888), ಫಾರೂಖ್ ಎಂ. (ಎಂಎಂಬಿ) (878), ಸೈಯದ್ ಆಸೀಫ್ ಅಹ್ಮದ್ (ಜುನೈದಿ) (804), ಸರ್ಫರಾಜ್ ಅಹ್ಮದ್ ಕೆ. (ಶಾಲು ಹಾಶ್ಮಿ) (801), ಗೌಸ್ ಪೀರ್ (799).

ಈ ಬಾರಿಯ ಚುನಾವಣೆಯಲ್ಲಿ ಬಿಸ್ಮಿಲ್ಲಾ, ಮದೀನಾ ಮತ್ತು ಇತ್ತೆಹಾದುಲ್ ಮುಸ್ಲಿಮೀನ್ ಎಂಬ ಗುಂಪುಗಳ ಮೂಲಕ ಹಾಗೂ ಹಲವರು ಸ್ವತಂತ್ರರಾಗಿಯೂ ಚುನಾವಣೆ ಕಣಕ್ಕೆ ಇಳಿದಿದ್ದರು. ಬಿಸ್ಮಿಲ್ಲಾ ಗುಂಪಿನ 9 ಸದಸ್ಯರು ಆಯ್ಕೆಯಾಗಿದ್ದರೂ ಅಧಿಕಾರದ ಗದ್ದುಗೆ ಹಿಡಿಯಲು ಸಾಧ್ಯವಾಗಿಲ್ಲ. ಉಳಿದಂತೆ ಮದೀನಾ ಮತ್ತು ಇತ್ತೆಹಾದುಲ್ ಮುಸ್ಲಿಮೀನ್ ಗುಂಪಿನಿಂದ ತಲಾ 6 ಜನರು ಆಯ್ಕೆಯಾಗಿದ್ದಾರೆ. ಎರಡೂ ಗುಂಪಿನವರು ಒಪ್ಪಂದ ಮಾಡಿಕೊಂಡು ಆಡಳಿತ ನಡೆಸುವ ಅನಿವಾರ್ಯತೆ ಎದುರಾಗಿದೆ.

21 ಸ್ಥಾನಗಳಿಗೆ 89 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಮೌಅಜಮ್ ಪಾಷಾ ಚುನಾವಣಾಧಿಕಾರಿಯಾಗಿದ್ದರು.

error: Content is protected !!