ಸಾಮೂಹಿಕ ಪೂಜೆ, ಸತ್ಸಂಗ, ಮದುವೆಗಳಿಂದ ಸಾಮರಸ್ಯ ವೃದ್ಧಿ

ಸಾಮೂಹಿಕ ಪೂಜೆ, ಸತ್ಸಂಗ, ಮದುವೆಗಳಿಂದ ಸಾಮರಸ್ಯ ವೃದ್ಧಿ

ಕೆ.ಎನ್.ಹಳ್ಳಿ : ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಶಾರದೇಶಾನಂದಜೀ ಅಭಿಮತ

ಮಲೇಬೆನ್ನೂರು, ಅ.26- ಸಾಮೂಹಿಕ ವಾಗಿ ಆಚರಿಸುವ ಪೂಜೆ ಸತ್ಸಂಗ ಮತ್ತು ಮದುವೆಗಳಿಂದಾಗಿ ಸಮಾಜದಲ್ಲಿ ಸಾಮರಸ್ಯ ವೃದ್ಧಿಯಾಗಲು ಸಹಕಾರಿಯಾಗುತ್ತದೆ ಎಂದು ಹರಿಹರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ಶಾರದೇಶಾನಂದಜೀ ಮಹಾರಾಜ್ ಹೇಳಿದರು.

ಅವರು, ಗುರುವಾರ ಕಡರನಾಯಕನ ಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಶ್ರೀ ಮಂಜುನಾಥ ಸ್ವಾಮಿ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಹೊಳೆಸಿರಿಗೆರೆ ವಲಯ ಮತ್ತು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು, ಕೆ.ಎನ್.ಹಳ್ಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬದುಕಿನಲ್ಲಿ ಎಲ್ಲರೂ ಸದಾ ಒಳ್ಳೆಯ ಚಿಂತನೆ, ಇನ್ನೊಬ್ಬರಿಗೆ ಒಳ್ಳೆಯದನ್ನು ಬಯಸುವ ಮನಸ್ಸನ್ನು ಬೆಳೆಸಿಕೊಂಡಾಗ ಮಾತ್ರ ನಾವು ಮಾಡುವ ಪೂಜೆಗಳಿಗೆ ನಿಜವಾದ ಅರ್ಥ ಸಿಗುತ್ತದೆ. ಪೂಜೆಯನ್ನೂ ಸಹ ಭಕ್ತಿ, ಶ್ರದ್ಧೆಯಿಂದ ಮಾಡಿದಾಗ ಪೂಜಾಫಲ ಲಭಿಸುತ್ತದೆ ಎಂದರು. 

ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಿದ ಮಾಜಿ ಶಾಸಕ ಎಸ್.ರಾಮಪ್ಪ ಮಾತನಾಡಿ, ಮಹಿಳೆಯರು ಧರ್ಮಸ್ಥಳ ಸಂಘಗಳಲ್ಲಿ ಮಾತ್ರ ವ್ಯವಹಾರ ಮಾಡಬೇಕು. ಖಾಸಗಿ ಫೈನಾನ್ಸ್‌ಗಳಿಗೆ ಚೀಟಿ
ಹಣ ಕಟ್ಟಿ ಮೋಸ ಹೋಗಬೇಡಿ ಎಂದು ಎಚ್ಚರಿಸಿ, ಮಕ್ಕಳನ್ನು ಚೆನ್ನಾಗಿ ಓದಿಸಿ, ಅವರನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಮಹಿಳೆಯರಲ್ಲಿ ರಾಮಪ್ಪ ಅವರು ಮನವಿ ಮಾಡಿದರು.

ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಎಂ.ಲಕ್ಷ್ಮಣ್, ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಎನ್.ಜಿ.ನಾಗನಗೌಡ್ರು, 1705ನೇ ಮದ್ಯವರ್ಜನೆ ಶಿಬಿರದ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಸಿರಿಗೆರೆ ಪರಮೇಶ್ವರಗೌಡ, ಪ್ರವಚನಕಾರ ಡಿ.ಕೆ.ಸಿದ್ದೇಶ್ ಮಾತನಾಡಿದರು.

ಕೆ.ಎನ್.ಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಮಂಜಮ್ಮ ಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು.

ಹೊಳೆಸಿರಿಗೆರೆ ಗ್ರಾ.ಪಂ. ಅಧ್ಯಕ್ಷ ಬಿ.ಶೇಖರಪ್ಪ, ಎಳೆಹೊಳೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಮಹಾದೇವಮ್ಮ ವೀರನಗೌಡ, ಕೆ.ಎನ್.ಹಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಪರಶುರಾಮ, ಗ್ರಾ.ಪಂ. ಮಾಜಿ ಅಧ್ಯಕ್ಷ ವಿ.ಕುಬೇರಪ್ಪ, ಪಿಎಸಿಎಸ್ ಅಧ್ಯಕ್ಷ ಕುಮಾರ್ ಸಾಲಕಟ್ಟೆ, ಹಾ.ಉ.ಸ ಸಂಘದ ಅಧ್ಯಕ್ಷ ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಟಿ.ಲಿಂಗರಾಜ್, ಸ.ಹಿ.ಪ್ರಾ. ಶಾಲೆ ಅಧ್ಯಕ್ಷ ಶಿವಾನಂದ, ಗ್ರಾ.ಪಂ. ಸದಸ್ಯ ಗುಂಡೇರಿ ಲೋಕೇಶ್, ಪೂಜಾ ಸಮಿತಿಯ ಗೌರವಾಧ್ಯಕ್ಷೆ ಶ್ರೀಮತಿ ರುದ್ರಮ್ಮ ಮಹಾದೇವಪ್ಪ ಬಣಕಾರ್, ಅಧ್ಯಕ್ಷ ಕೆ.ಎನ್.ನಟರಾಜ್, ಉಪಾಧ್ಯಕ್ಷ ಭರಮಗೌಡ ಪಾಟೀಲ್, ಕೋಶಾಧಿಕಾರಿ ಶ್ರೀಮತಿ ಕವಿತಾ ಭಿಮೇಶ್, ಖಜಾಂಚಿ ಹೊಳೆಸಿರಿಗೆರೆಯ ನಿವೃತ್ತ ಯೋಧ ಎನ್.ಪರಶುರಾಮ್, ಸಹ ಖಜಾಂಚಿ ರಾಮಪ್ಪ ಸಾಲಕಟ್ಟೆ, ಕುಂದೂರು ಮಂಜಪ್ಪ, ಎನ್.ಎಂ.ವೆಂಕಟೇಶ್, ಪಾಳ್ಯದ ಹೆಚ್.ಪಿ.ನಾಗೇಂದ್ರಪ್ಪ, ಕೆ.ಎನ್.ಹಳ್ಳಿಯ ಶಿವರಾಜ್, ಹುಗ್ಗಿ ರೇವಣಪ್ಪ, ಕುಂಬಳೂರು ವಾಸು, ನಿವೃತ್ತ ಯೋಧರಾದ ಗೋಪಾಲಶೆಟ್ಟಿ, ಪಿ.ನಾಗರಾಜ್, ಕೊಕ್ಕನೂರು ಒಕ್ಕೂಟದ ಹನುಮಂತರಾಯ, ಕೆ.ಎನ್.ಹಳ್ಳಿ ಒಕ್ಕೂಟಗಳ ನಟರಾಜ್, ಅಕ್ಕಮ್ಮ, ಜ್ಞಾನ ವಿಕಾಸ ಸಮಾನ್ವಯಾಧಿಕಾರಿ ಸವಿತಾ, ಮೇಲ್ವೆಚಾರಕರಾದ ರಂಜಿತಾ, ರಕ್ಷಿತಾ, ಗಂಗಾಧರ್, ಹರೀಶ್, ಸಂಪತ್‌ಲಕ್ಷ್ಮಿ, ಸಂತೋಷಿನಿ, ಮಾರುತಿ ಮತ್ತಿತರರು ಭಾಗವಹಿಸಿದ್ದರು.

ಕು.ಮೀರಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಹೊಳೆಸಿರಿಗೆರೆ ವಲಯ ಮೇಲ್ವೆಚಾರಕ ರಂಗಸ್ವಾಮಿ ಸ್ವಾಗತಿಸಿದರು. ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರೆ, ಶುದ್ದಗಂಗಾ ಘಟಕದ ಪ್ರೇರಕ ಕೆ.ಹನುಮಗೌಡ ವಂದಿಸಿದರು.

error: Content is protected !!