ದಾವಣಗೆರೆ, ಅ.26- ಬಿಐಇಟಿ ಹಾಗೂ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಸಹಯೋಗದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ `ಕ್ವಾಂಟಮ್ ಕಂಪ್ಯೂಟಿಂಗ್’ ವಿಚಾರ ಸಂಕಿರಣವನ್ನು ಬಿಐಇಟಿಯ ಸ್ವಾಮಿ ವಿವೇಕಾನಂದ ಸೆಮಿನಾರ್ ಹಾಲ್‌ನಲ್ಲಿ ಗುರುವಾರ ಉದ್ಘಾಟಿಸಲಾಯಿತು.
ಬಿಐಇಟಿ ಪ್ರಾಂಶುಪಾಲ ಡಾ.ಹೆಚ್.ಬಿ. ಅರವಿಂದ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೊ.ಎಸ್ಪಿ. ಬಸವರಾಜು, ಡಾ.ಹೆಚ್.ಎಂ. ಮಹೇಶ್, ಡಾ.ಎಂ. ನಾಗರಾಜ್, ಡಾ.ಕೆ.ಎಸ್. ಬಸವರಾಜಪ್ಪ ಆಗಮಿಸಿದ್ದರು.
ಮಿನತಿ ಹೆಚ್. ಪ್ರಾರ್ಥಿಸಿದರು. ಪ್ರೊ.ವಿ.ಕೆ. ಗೀತಾ ನಿರೂಪಿಸಿದರು. ಡಾ.ಜಗದೀಶ್ ಎಂ.ಆರ್. ಸ್ವಾಗತಿಸಿದರು. ಡಾ.ಕೃಷ್ಣಕುಮಾರ್ ವಂದಿಸಿದರು.