ಮಲೇಬೆನ್ನೂರು, ಅ.16- ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠದಲ್ಲಿ ಶುಕ್ರವಾರ ದುರ್ಗದ ಹುಲಿ ಹಾಗು ಗಂಡುಗಲಿ ಮದಕರಿ ನಾಯಕರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರು, ನಾಡಿನ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಹೆಮ್ಮೆಯ ಮದಕರಿ ನಾಯಕರ ಹೋರಾಟದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಎಂದರು.
ಚಿತ್ರದುರ್ಗದಲ್ಲಿ ಮದಕರಿ ನಾಯಕ ಥೀಮ್ ಪಾರ್ಕ್ ಸ್ಥಾಪನೆ ಮಾಡಬೇಕೆಂದು ಸ್ವಾಮೀಜಿ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಮುಖಂಡ ರಾದ ಹೊದಿಗೆರೆ ರಮೇಶ್, ತ್ಯಾವಣಗಿ ಗೋವಿಂದಸ್ವಾಮಿ, ಮೆದಿಕೆರೆ ಸಿದ್ದೇಶ್, ಮಾಡಾಳ್ ಲೋಕೇಶ್ವರಪ್ಪ, ಜ್ಞಾನೇಶ್, ಉಪನಾಯಕನಹಳ್ಳಿ ಶಿವರಾಜ್ ಇತರರು ಹಾಜರಿದ್ದರು.