ದಾವಣಗೆರೆ, ಅ.6- ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಗಾಂಧಿ ಜಯಂತಿ ದಿನ ಎಪಿಎಂಸಿ ಸ್ವಚ್ಛತಾ ಕೆಲಸಗಾರರಿಗೆ ಸನ್ಮಾನ ಮಾಡಿ ಗೌರವಿಸಲಾ ಯಿತು. ಮಾರುಕಟ್ಟೆ ಕಾರ್ಯದರ್ಶಿ ಹೆಚ್.ಸಿ.ಎಂ. ರಾಣಿಯವರು ಅಧ್ಯಕ್ಷತೆ ವಹಿಸಿದ್ದರು. ಸೆ.15 ರಿಂದ ಎಪಿಎಂಸಿ ಪ್ರಾಂಗಣದಲ್ಲಿ ಸ್ವಚ್ಛತೆ ಆಂದೋಲನ, ಗಿಡ ನೆಡುವ ಕಾರ್ಯಕ್ರಮ. ತರಕಾರಿ ಮಾರುಕಟ್ಟೆಯಲ್ಲಿ ಸ್ವಚ್ಛತೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು. ಸಹಾಯಕ ಕಾರ್ಯದರ್ಶಿ ಹರಿ ಹೊನ್ನಾಳಿ, ಕಾರ್ಯದರ್ಶಿ ಮಹೇಶ್, ಪ್ರಸನ್ನಕುಮಾರ್, ಗಿರೀಶ್ ನಾಯ್ಕ್, ಗಣೇಶ್, ತಿಪ್ಪೇಸ್ವಾಮಿ, ಧನ್ಯಕುಮಾರ್, ರಾಜೇಶ್ವರಿ, ಮಾಲಾ ಗಂಗಾಧರ್ ಮತ್ತು ವರ್ತಕರಾದ ದೊಗ್ಗಳ್ಳಿ ಬಸಣ್ಣ, ತಿಪ್ಪೇಸ್ವಾಮಿ, ದಯಾನಂದ, ಕಿರುವಾಡಿ ಸೋಮಣ್ಣ, ಜಾವೀದ್ ಮತ್ತಿತರರು ಭಾಗವಹಿಸಿದ್ದರು.
January 26, 2025